ಯಾವುದೇ ಕಾರಣಕ್ಕೂ ಆಕ್ರಮ ಗಣಿಕಾರಿಗೆ ಅವಕಾಶ ನೀಡಲ್ಲ : ಸಚಿವ ಮುರುಗೇಶ್ ನಿರಾಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು-ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಕಾರಣಕ್ಕೂ ಆಕ್ರಮ ಗಣಿಕಾರಿಗೆ ಅವಕಾಶ ಕೊಡದೆ ರಾಜ್ಯದ ಆದಾಯ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದರು. ಸಚಿವರಾದ ನಂತರ ಮೊದಲ ಬಾರಿಗೆ ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾನೂನು ಬಾಹಿರ ಗಣಿಗಾರಿಕೆ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡು ಕಾನೂನು ಬದ್ಧ ಗಣಿಗಾರಿಕೆಗೆ ಮತ್ತು ನೀಡುತ್ತೇವೆ ಎಂದು ತಿಳಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ  ನಾನು ಕೈಗಾರಿಕೆ ಸಚಿವನಾಗಿ ಕೆಲಸ ಮಾಡಿ,ಎರಡು ಜಾಗತಿಕ ಮಟ್ಟ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿರುವ ಅನುಭವ ನನಿಗಿದೆ.ಇದನ್ನು ಬಳಸಿಕೊಂಡು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುವುದಾಗಿ ವಾಗ್ದಾನ ಮಾಡಿದರು. ಗಣಿ ಮತ್ತು ಭೂ ವಿಜ್ಞಾನ ಖಾತೆಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಇದೆ.ಇಲಾಖೆಗೆ ಸಂಬಂಧಿಸಿ ಅಧ್ಯಯನ ಮಾಡಿ ಕೈಗಾರಿಗೆ ಅನುಕೂಲ ಆಗುವಂತ ಕೆಲಸ ಮಾಡುತ್ತೇನೆ ಎಂದರು.

ಅಕ್ರಮ ಗಣಿಗಾರಿಕೆ ಗೆ ಅವಕಾಶ ಕೊಡದಂತೆ ನೋಡಿಕೊಳ್ಳವುದು ತಮ್ಮ ಮೊದಲ ಆದ್ಯತೆಯಾಗಿದೆ.ಕೇಂದ್ರದಲ್ಲಿ ಪ್ರಹ್ಲಾದ ಜೋಷಿ ಅವರು ನಮ್ಮವರೇ ಹಾಗೂ ಹತ್ತಿರದವರೂ ಆಗಿರುವುದರಿಂದ ಕೇಂದ್ರ ಸರ್ಕಾರದ ಕಾಯ್ದೆ ಕಾನೂನು ಜಾರಿಗೊಳಿಸಲು ಅನುಕೂಲಾಗುತ್ತದೆ ಎಂದು ನಿರಾಣಿ ಅಭಿಪ್ರಾಯಪಟ್ಟರು.

ಗಣಿಗಾರಿಕೆಗೆ ಇರುವ ತೊಂದರೆಗಳಿದೆ ಅದರೆಡೆಗೆ ಗಮನ ಕೊಡಲಾಗುವುದು.ಪಕ್ಕದ ರಾಜ್ಯಗಳಲ್ಲಿ ಇರುವ ನೀತಿಗಳನ್ನು ಅಧ್ಯಯನ ಮಾಡುತ್ತೇವೆ ಎಂದು ಹೇಳಿದರು.ಹಿಂದಿನ ಸಚಿವರಾದ ಸಿಸಿ ಪಾಟೀಲ್ ಅವರ ಸಲಹೆಯನ್ನು ಪಡೆಯುತ್ತೇನೆ.ನನಗೆ ನೀಡಿರುವ ಖಾತೆ ಬಗ್ಗೆ ಸಂಪೂರ್ಣ ತೃಪ್ತಿಯಿದೆ.ನಾನು ಯಾವುದೇ ಇಲಾಖೆಗೆ ಬೇಡಿಕೆ ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಮುಖ್ಯಮಂತ್ರಿ ಬಳಿ ಬೇರೆ ಖಾತೆ ಕೇಳಿದ್ದೇ ಎನ್ನುವುದೆಲ್ಲಾ ಊಹಾಪೋಹ.ರಾಜ್ಯದ ಜನತೆಯ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನ್ನ ಮೇಲೆ ವಿಶ್ವಾಸವಿಟ್ಟು ಕೊಟ್ಟಿರುವ ಖಾತೆಯಲ್ಲೇ ಪ್ರಮಾಣಿಕ ಕೆಲಸ ಮಾಡುವುದಾಗಿ ತಿಳಿಸಿದರು.

ಕೆಲವು ಸಚಿವರು ತಮಗೆ ನೀಡಲಾಗಿರುವ ಖಾತೆಗಳ ಹಂಚಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕುರಿತಾಗಿ ಮಾತನಾಡಿದ ಸಚಿವ ನಿರಾಣಿ ಅವರು, ಯಾರಿಗೆ ಯಾವ ಖಾತೆ ಕೊಟ್ಡಿದ್ದಾರೋ ಅದನ್ನು ನಿಭಾಯಿಸುವುದು ಒಳ್ಳೆಯದು ಎಂದು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು. ಈಗ ನೀಡಿರುವ ಗಣಿಗಾರಿಕೆ ಇಲಾಖೆ ಬಗ್ಗೆ ತೃಪ್ತಿ ಇದೆ.ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ‌.ನಾನು ಯಾವ ಖಾತೆಗೂ ಬೇಡಿಕೆ ಇಟ್ಟಿರಲಿಲ್ಲ.

ಮುಂದೆಯೂ ನಾನು ಖಾತೆ ಬಗ್ಗೆ ಬೇಡಿಕೆ ಇಡುವುದಿಲ್ಲ.ಸಿಎಂ ಕೈ ಬಲಪಡಿಸಲು ಎಲ್ಲ ರೀತಿ ಶ್ರಮಿಸುತ್ತೇನೆ ಎಂದು ಶಪಥ ಮಾಡಿದರು. ಕೆಲವರ ಖಾತೆಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳಾಗಿವೆ.ಆಯಾಯ ಖಾತೆಯಲ್ಲಿ ಒಳ್ಳೆಯ ಕೆಲಸ ಮಾಡುವುದು ಒಳ್ಳೆಯದು ಎಂದು ಸಲಹೆ ಮಾಡಿದರು. ಈಗಾಗಲೇ ಸಾಕಷ್ಟು ತಡವಾಗಿದೆ.ಈ ಸಂದರ್ಭದಲ್ಲಿ ಉಳಿದವರು ಅಸಮಾಧಾನ ಹೊರಹಾಕದೇ ತಮಗೆ ಕೊಟ್ಟಿರುವ ಖಾತೆ ಕಡೆ ಗಮನ ಹರಿಸುವುದು ಒಳ್ಳೆಯದು‌.ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.

ಆಗಾಗ್ಗೆ ಸಚುವರ ಖಾತೆಗಳನ್ನು ಬದಲಾವಣೆ ಮಾಡುವುದು ಸಾಮಾನ್ಯ ಪ್ರಕ್ರಿಯೆ.ಮುಂದೆ ಪುನಾರಚನೆ ವೇಳೆ ಅವಕಾಶ ಸಿಗಬಹುದು.ಕೋವಿಡ್ ಕಾರಣ ಸಾಕಷ್ಟು ಕೆಲಸ ಹಿಂದುಳಿದಿದೆ.ಸಿಎಂ ಕೆಲ ಬದಲಾವಣೆ ಮಾಡಿ ಖಾತೆ ನೀಡಿದ್ದಾರೆ.ಈಗ ಖಾತೆ ಬಗ್ಗೆ ವಿವಾದ ಬೇಡ ಎಂದು ಮನವಿ ಮಾಡಿದರು. ಅಭಿವೃದ್ಧಿಯತ್ತ ಮುಂದುವರಿಯಬೇಕೆಂದು ಸಹಪಾಠಿಗಳಿಗೂ ಮನವಿ ಮಾಡುತ್ತೇನೆ. ನೂತನವಾಗಿ ಖಾತೆ ಹಂಚಿಕೆ ಮಾಡಿದ ಸಿಎಂಗೆ ಧನ್ಯವಾದ.ಸಚಿವ ಸ್ಥಾನ ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದ ಹೇಳಿದರು.

Facebook Comments