ಸ್ನಾಯು ನೋವು ನಿವಾರಣೆಗೆ ‘ಪಂಚ’ ಸೂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ಸ್ನಾಯು ನೋವುಗಳು ಅಥವಾ ಸ್ನಾಯುಶೂಲೆ ಜೀವಮಾನದಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಸ್ನಾಯು ನೋವಿಗೆ ಕೆಲವು ಕಾರಣಗಳೆಂದರೆ ಸ್ನಾಯುಗಳಲ್ಲಿನ ಒತ್ತಡ, ಸ್ನಾಯು ನೋವಿನಿಂದಾಗಿ ನಿಮ್ಮ ನೆಚ್ಚಿನ ಕ್ರೀಡೆಗಳು ಅಥವಾ ಕಚೇರಿಯ ಪ್ರಮುಖ ಮೀಟಿಂಗ್‌ನಿಂದ ದೂರ ಉಳಿಯಬೇಕಾಗಬಹುದು.

ವೇಗವಾಗಿ ಇದನ್ನು ಶಮನ ಮಾಡಲು ನೋವಿಗೆ ಕಾರಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸ್ನಾಯು ನೋವಿನಿಂದ ಮುಕ್ತರಾಗಿ ಮರಳಿ ನೀವು ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಇಲ್ಲಿ ಕೆಲವೊಂದು ಮುಖ್ಯ ಮದ್ದುಗಳಿವೆ.

ಮಸಾಜ್: ಸ್ನಾಯು ನೋವಿಗೆ ಮಸಾಜ್ ಅತ್ಯಂತ ಪರಿಣಾಮಕಾರಿ ಮದ್ದು. ಇದು ರಕ್ತಸಂಚಲನಕ್ಕೆ ನೆರವಾಗುತ್ತದೆ ಮತ್ತು ವೇಗವಾಗಿ ಉಪಶಮನ ನೀಡುತ್ತದೆ. ಹಿತವಾದ ಒತ್ತಡದೊಂದಿಗೆ ಒಂದೇ ನಿರ್ದೇಶನದಲ್ಲಿ ನೋವಿರುವ ಜಾಗಕ್ಕೆ ಮಸಾಜ್ ಮಾಡಿ.

ಐಸ್ ಪ್ಯಾಕ್: ಸ್ನಾಯು ನೋವು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ತಂಪು ಶಾಖ ಚಿಕಿತ್ಸೆ ನೀಡಲು ಐಸ್ ಬಳಸಿಕೊಂಡು ಭಾದಿತ ಜಾಗಕ್ಕೆ ಇಟ್ಟುಬಿಟ್ಟರೆ ಪರಿಹಾರ ಸಿಗುವುದು. ಇದು ಕ್ರೀಡಾಳುಗಳಿಗೆ ಆಗುವಂತಹ ಸ್ನಾಯು ನೋವನ್ನು ಇದು ಕಡಿಮೆ ಮಾಡುವುದು. ಐಸ್ ಪ್ಯಾಕ್ ಅಥವಾ ತಂಪನ್ನು ಗಾಯಗೊಂಡ ಭಾಗಕ್ಕೆ ನಿಧಾನವಾಗಿ ನೀಡಿದರೆ ಆಗ ರಕ್ತ ಸಂಚಾರವು ಕಡಿಮೆ ಆಗಿ ಈ ಭಾಗದಲ್ಲಿನ ನೋವು ಮತ್ತು ಉರಿಯೂತವು ಕಡಿಮೆ ಆಗುವುದು.

ಸ್ನಾಯುಗಳ ಸೆಳೆತ ಮತ್ತು ಒಳಗಿನ ರಕ್ತಸ್ರಾವವನ್ನು ಕೂಡ ಇದು ಕಡಿಮೆ ಮಾಡುವುದು. ಐಸ್ ಪ್ಯಾಕ್, ಐಸ್ ಮಸಾಜ್, ಜೆಲ್ ಪ್ಯಾಕ್, ಕೆಮಿಕಲ್ ಕೋಲ್ಡ್ ಪ್ಯಾಕ್, ವಾಪೊ ಕೂಲಂಟ್ ಸ್ಪ್ರೇ ಗಳು ಸ್ನಾಯು ನೋವಿನಿಂದ ಆರಾಮ ನೀಡುವಂತಹ ಕೆಲವೊಂದು ವಿಧಾನಗಳಾಗಿವೆ.

ಬಿಸಿ ಸ್ನಾನ:  ನರಗಳು ನೋವಿನ ಸೂಚನೆ ನೀಡುವುದನ್ನು ದುರ್ಬಲಗೊಳಿಸುವಂತಹ ಶ್ರೇಷ್ಠ ಗುಣವನ್ನು ಬಿಸಿ ಹೊಂದಿದೆ. ಸ್ನಾಯುಗಳು ಹಿಡಿದುಕೊಂಡಿದ್ದರೆ ಬಿಸಿ ನೀರಿನ ಸ್ನಾನ ಮಾಡಿ. ಸ್ನಾಯು ನೋವಿಗೆ ತುಂಬಾ ಸುಲಭ ಮತ್ತು ಪರಿಣಾಮಕಾರಿ ಮದ್ದು ಇದಾಗಿದೆ. ಸ್ನಾಯುವಿನ ನೋವನ್ನು ಬೇಗ ನಿವಾರಿಸುತ್ತದೆ.

ಮೆಗ್ನಿಶಿಯಂ: ದೇಹದಲ್ಲಿ ಮೆಗ್ನಿಶಿಯಂ ಅಂಶವು ಕಡಿಮೆ ಇದ್ದರೆ ಆಗ ಸ್ನಾಯು ಸೆಳೆ ಮತ್ತು ಸ್ನಾಯುಗಳು ಬಿಗಿಯಾಗುವುದು. ಇದರಿಂದ ಮೆಗ್ನಿಶಿಯಂ ಸಪ್ಲಿಮೆಂಟ್ ಸೇವಿಸಿ. ಮೆಗ್ನಿಶಿಯಂ ಅಧಿಕವಾಗಿ ಇರುವಂತಹ ಆಹಾರ ಸೇವಿಸಿ. ಮೆಗ್ನಿಶಿಯಂ ಅಧಿಕವಾಗಿ ಇರುವಂತಹ ಕೆಲವೊಂದು ಆಹಾರಗಳೆಂದರೆ ಕಾಕಂಬಿ, ಕುಂಬಳಕಾಯಿ ಬೀಜಗಳು, ಬಸಳೆ, ಕೋಕಾ ಹುಡಿ, ಕಪ್ಪು ಅವರೆ, ಅಗಸೆ ಬೀಜಗಳು, ಎಳ್ಳು ಬೀಜಗಳು, ಸೂರ್ಯಕಾಂತಿ ಬೀಜಗಳು, ಬಾದಾಮಿ ಮತ್ತು ಗೋಡಂಬಿ.

ಸಮುದ್ರ ಉಪ್ಪು : ನೈಸರ್ಗಿಕವಾಗಿ ಸಿಗುವಂತಹ ಸಮುದ್ರ ಉಪ್ಪು ಸ್ನಾಯುಗಳ ಅಂಗಾಂಶಗಳಲ್ಲಿ ಇರುವಂತಹ ಉರಿಯೂತ ಕಡಿಮೆ ಮಾಡುವುದು ಮತ್ತು ನೋವಿನಿಂದ ಪರಿಹಾರ ನೀಡುವುದು. ಫೈಬ್ರೊಮ್ಯಾಲ್ಗಿಯದಂತಹ ದೀರ್ಘಕಾಲಿಕ ಸ್ನಾಯು ನೋವಿನ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಒಂದು ಸಾಮಾನ್ಯ ಗಾತ್ರದ ಬಿಸಿ ನೀರಿನ ಬಾತ್ ಟಬ್ ಗೆ 1-2 ಕಪ್ ಸಮುದ್ರ ಉಪ್ಪು ಹಾಕಿಕೊಳ್ಳಿ.

ಇದರಲ್ಲಿ 15-30 ನಿಮಿಷ ಕಾಲ ಆರಾಮ ಮಾಡಿ. ಇದರಲ್ಲಿ ಸ್ನಾನ ಮಾಡುವ ಪರಿಣಾಮವಾಗಿ ಸ್ನಾಯು ನೋವು ಕಡಿಮೆ ಆಗುವುದು ಮತ್ತು ಸೆಳೆತ ಕಡಿಮೆ ಆಗಿ ದೇಹಕ್ಕೆ ಒತ್ತಡದಿಂದ ಪರಿಹಾರ ಸಿಗುವುದು ಹಾಗೂ ಆರಾಮ ಸಿಗುವುದು.

Facebook Comments