ನಾಳೆ ಮುಂಬೈನಲ್ಲಿ ಪಂಡಿತ್ ಜಸ್‍ರಾಜ್ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಆ.18- ಅಮೆರಿಕದಲ್ಲಿ ಹೃದಯಾಘಾತದಿಂದ ನಿಧನರಾದ ಸಂಗೀತ ಲೋಕದ ದಿಗ್ಗಜ ಪದ್ಮವಿಭೂಷಣ ಪಂಡಿತ್ ಜಸ್‍ರಾಜ್ ಅವರ ಅಂತ್ಯಕ್ರಿಯೆ ನಾಳೆ ಮುಂಬೈನಲ್ಲಿ ನೆರವೇರಲಿದೆ.

ಭಾರತೀಯ ಶಾಸ್ತ್ರೀಯ ಗಾಯಕ ಮತ್ತು ಸಂಗೀತ ಮಾರ್ತಾಂಡ ಪಂಡಿತ್ ಜಸ್‍ರಾಜ್ ಅವರ ಪಾರ್ಥೀವ ಶರೀರ ನ್ಯೂಜೆರ್ಸಿಯಿಂದ ವಿಶೇಷ ವಿಮಾನದಲ್ಲಿ ನಾಳೆ ಮುಂಜಾನೆ ಮುಂಬೈಗೆ ಬರಲಿದೆ.

ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಜಸ್‍ರಾಜ್ ಅವರ ಅಂತ್ಯಕ್ರಿಯೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್,
ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿ ಗಣ್ಯರು ಸಂಗೀತ ದಿಗ್ಗಜ ಪಂಡಿತ್ ಜಸ್‍ರಾಜ್ ಅವರ ನಿಧನಕ್ಕೆ ಸಂತಾಪ ಕೋರಿದ್ದಾರೆ.

Facebook Comments

Sri Raghav

Admin