ರೂಪಾಂತರಿ ಕೊರೋನಾ ವೈರಸ್ AY4.2 ತಡೆಗೆ ಮುಂದಾದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.27-ಹೊಸ ರೂಪಾಂತರಿ ವೈರಸ್ ಎವೈ4.2 ಆತಂಕದ ಹಿನ್ನಲೆಯಲ್ಲಿ ಬಿಬಿಎಂಪಿ ಕಠಿಣ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಆರೋಗ್ಯ ಇಲಾಖೆ ಹಾಗೂ ತಜ್ಞರ ಅಭಿಪ್ರಾಯ ಪಡೆದು ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್‍ನಲ್ಲಿ ನಗರದಲ್ಲಿ ರೂಪಾಂತರಿ 3 ಕೇಸ್‍ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು 7 ಕೇಸ್‍ಗಳು ದೃಢಪಟ್ಟಿದೆ. ಹಾಗಾಗಿ ಆರಂಭದಲ್ಲೇ ರೂಪಾಂತರಿ ತಡೆಗೆ ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ.

ಹೊಸ ರೂಪಾಂತರಿ ತಡೆಗೆ ಕ್ರಮಗಳು: ಹೆಚ್ಚೆಚ್ಚು ಸ್ಯಾಂಪಲ್‍ಗಳನ್ನ ಪಡೆದು ಜಿನೋಮ್ ಸೀಕ್ವೆಂನ್ಸಿಂಗ್ ಟೆಸ್ಟ್‍ಗೆ ಒಳಪಡಿಸುವುದು, – ನಿತ್ಯದ ಕೇಸ್‍ಗಳು, ಆಸ್ಪತ್ರೆಗೆ ದಾಖಲಾಗುತ್ತಿ ರುವವರ ಸಂಖ್ಯೆ, ಸಂಪರ್ಕಿತರ ಸಂಖ್ಯೆ ಮೇಲೆ ಹದ್ದಿನ ಕಣ್ಣಿಡುವುದು, – ಎವೈ4.2 ಸಬ್ ವೇರಿಯಂಟ್ ಬಗ್ಗೆ ಹೆಚ್ಚಿನ ಅಧ್ಯಯನಕ್ಕೊಳಪಡಿಸುವುದು, ಹೊಸ ರೂಪಾಂತರಿ ಕಾಣಿಸಿಕೊಂಡಿರುವವರ ಸಂಪರ್ಕಿತರನ್ನು ಐಸೋಲೇಶನ್ ಒಳಪಡಿಸುವುದು.

ರೂಪಾಂತರಿ ವೈರಸ್‍ಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುವುದು, ಕೇಂದ್ರ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸು ವುದು, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಮತ್ತೆ ಜÁಗೃತಿ ಮೂಡಿಸಲು ಹಾಗೂ ಜನ ಗುಂಪು ಸೇರದಂತೆ ನೋಡಿಕೊಳ್ಳಲು ಮಾರ್ಷಲ್‍ಗಳಿಗೆ ಸೂಚನೆ ನೀಡುವುದು.

ಪ್ರತಿಯೊಬ್ಬ ಅರ್ಹರಿಗೂ ಶೀಘ್ರದಲ್ಲೇ ವ್ಯಾಕ್ಸಿನೇಶನ್ ಹಾಕುವುದು, ರೂಪಾಂತರಿ ವೈರಸ್ ಪತ್ತೆಯಾಗಿರುವ ಲ್ಯಾಬ್ ತಜ್ಞರೊಂದಿಗೆ ನಿರಂತರ ಚರ್ಚೆ, ಸರ್ಕಾರ ಸೂಚಿಸಿದರೆ ಅಂತರ್ ರಾಜ್ಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್‍ಗೆ ತಯಾರಿ ಮಾಡಿಕೊಳ್ಳುವುದು

Facebook Comments