‘ಇಂದು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ” : ದಿಶಾ ತಂದೆ ತಂದೆ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಡಿ.6- ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ. ದೇಶದಲ್ಲಿ ಅತ್ಯಾಚಾರ ಎಸಗುವ ಆರೋಪಿಗಳಿಗೆ ಇದೇ ಶಿಕ್ಷೆಯಾಗಬೇಕು…ಇಂದು ಮುಂಜಾನೆ ಹೈದರಾಬಾದ್ ಹೊರವಲಯದಲ್ಲಿ ಪಶು ವೈದ್ಯೆ ದಿಶಾಳ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಎಸಗಿದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿರುವುದಕ್ಕೆ ಅವರ ತಂದೆ ಪ್ರತಿಕ್ರಿಯಿಸಿದ್ದು ಹೀಗೆ.

ನನ್ನ ಮಗಳು ಪುನಃ ಹುಟ್ಟಿ ಬರುವುದಿಲ್ಲ ಎಂಬುದು ನನಗೆ ಗೊತ್ತು. ಆದರೆ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಎಸಗುವವರಿಗೆ ಇಂದಿನ ಎನ್‍ಕೌಂಟರ್ ಕಾಮುಕರಿಗೆ ಅತ್ಯಂತ ಕಠಿಣ ಸಂದೇಶವನ್ನು ರವಾನಿಸಿದೆ ಎಂದು ಆಕ್ರೋಶಭರಿತವಾಗಿ ಹೇಳಿದರು. ನನ್ನ ಮಗಳು ಸತ್ತು ಇಂದಿಗೆ 10 ದಿನವಾಗಿದೆ. ಅವಳ ಆತ್ಮಕ್ಕೆ ಕೊನೆಗೂ ಶಾಂತಿ ಸಿಕ್ಕಿದೆ ಎಂದು ಭಾವಿಸುತ್ತೇನೆ.

ಇನ್ನು ಮುಂದಾದರೂ ಅತ್ಯಾಚಾರ ಎಸಗುವವರು 10 ಬಾರಿ ಯೋಚನೆ ಮಾಡಲಿ. ಪೊಲೀಸರ ಈ ಕ್ರಮ ನನಗೆ ಸಂತಸ ತಂದಿದೆ ಎಂದು ಭಾವುಕರಾಗಿ ನುಡಿದರು. ದಿಶಾಳ ಸಹೋದರಿ ಮಾತನಾಡಿ, ನನ್ನ ಅಕ್ಕನನ್ನು ಅತ್ಯಾಚರ ಎಸಗಿ ಕೊಂದವರನ್ನು ಪೊಲೀಸರು ಎನ್‍ಕೌಂಟರ್ ನಡೆಸಿದ್ದಾರೆ ಎಂದು ಸುದ್ದಿ ಕೇಳಿ ಅತ್ಯಂತ ಸಂತೋಷವಾಯಿತು.

ಅತ್ಯಾಚಾರಿಗಳಿಗೆ ದೇಶದಲ್ಲಿ ಜಾಗವಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದರು.  ಕೇವಲ ನನ್ನ ಸಹೋದರಿ ಮಾತ್ರವಲ್ಲದೆ ಉತ್ತರಪ್ರದೇಶ ಸೇರಿದಂತೆ ದೇಶದ ನಾನಾ ಕಡೆ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಆರೋಪಿಗಳ ಮೇಲೆ ಇಂತಹ ಕಠಿಣ ಶಿಕ್ಷೆ ಜರುಗಿಸುವ ಮೂಲಕ ಅತ್ಯಾಚಾರ ಪ್ರಕರಣಗಳನ್ನು ತಡೆಯಬೇಕು ಎಂದು ಮನವಿ ಮಾಡಿದರು.

ಇನ್ನು ದೆಹಲಿಯಲ್ಲಿ ಇದೇ ರೀತಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ನಿರ್ಭಯಾಳ ಪೋಷಕರು ಕೂಡ ಪೊಲೀಸರ ಈ ದಿಟ್ಟ ಕ್ರಮವನ್ನು ಪ್ರಶಂಸಿಸಿದ್ದಾರೆ. ಹೈದರಾಬಾದ್ ಹೊರವಲಯದ ಶಂಸಾಬಾದ್ ನಿವಾಸದ ಬಳಿ ಇಂದು ಬೆಳಗ್ಗಿನಿಂದಲೇ ಸಾವಿರಾರು ಜನರು ಆಗಮಿಸಿ ಪೊಲೀಸರು ಎನ್‍ಕೌಂಟರ್ ನಡೆಸಿರುವುದಕ್ಕೆ ಸಂಭ್ರಮಿಸಿದರು.

Facebook Comments

Sri Raghav

Admin