ಹರಳು ಗಣಿಯಲ್ಲಿ ಭೂಕುಸಿತ ಸಂಭವಿಸಿ 50ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಯಾನ್‍ಗೊನ್(ಮ್ಯಾನ್ಮರ್), ಜು.2- ಮ್ಯಾನ್ಮರ್‍ನ ಉತ್ತರ ಭಾಗದಲ್ಲಿರುವ ಪಚ್ಚೆ ಹರಳು ಗಣಿಯೊಂದರಲ್ಲಿ ಭೂಕುಸಿತ ಸಂಭವಿಸಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.

ಮ್ಯಾನ್ಮಾರ್‍ನ ಪಕಂಡ್‍ನಲ್ಲಿರುವ ಪ್ರಸಿದ್ದ ಹಸಿರು ಹರುಳು ಗಣಿಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾನ್ಮರ್‍ನ ಅತಿದೊಡ್ಡ ನಗರಿ ಯಾನ್‍ಗೊನ್‍ನಿಂದ 950 ಕಿಮೀ ದೂರದಲ್ಲಿರುವ ಈ ಗಣಿ ವಿಶ್ವದ ಅತ್ಯಂತ ದೊಡ್ಡ ಮತ್ತು ಲಾಭದಾಯಕ ಪಚ್ಚೆ ಹರಳಿನ ಗಣಿಯಾಗಿದೆ.

ಈ ದುರಂತದಲ್ಲಿ ಅನೇಕ ಕಾರ್ಮಿಕರು ಗಾಯಗೊಂಡಿದ್ದಾರೆ. ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

Facebook Comments