ಬುದ್ಧಿಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಅಕ್ಕ-ತಮ್ಮ

ಈ ಸುದ್ದಿಯನ್ನು ಶೇರ್ ಮಾಡಿ

inspector wife missingಮೈಸೂರು, ನ.4- ಬುದ್ಧಿಮಾತು ಹೇಳಿದ್ದರಿಂದ ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.ಎನ್‍ಆರ್ ಮೊಹಲ್ಲಾದ ಐಶ್ವರ್ಯ (14) ಹಾಗೂ ನಕುಲ್ (12) ನಾಪತ್ತೆಯಾದ ಅಕ್ಕ-ತಮ್ಮ.

ಇವರಿಬ್ಬರೂ ಮನೆಯವರನ್ನು ಕೇಳದೆ 100ರೂ. ಖರ್ಚು ಮಾಡಿದ್ದರು. ಈ ಬಗ್ಗೆ ಪೋಷಕರು ಬುದ್ಧಿಮಾತು ಹೇಳಿದ್ದರಿಂದ ಅಕ್ಕ-ತಮ್ಮ ಮನೆ ಬಿಟ್ಟು ಹೋಗಿದ್ದಾರೆ.
ಅ.28ರಂದು ಮನೆ ಬಿಟ್ಟು ಹೋದವರು ಈವರೆಗೂ ಮನೆಗೆ ವಾಪಸಾಗಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ನೀಡಿದ ದೂರಿನ ಮೇರೆಗೆ ಎನ್‍ಆರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Facebook Comments