ನಾಯಿಗೆ ವಿಷ ಹಾಕಿ ಮೂರು ಚಿರತೆಗಳನ್ನು ಕೊಂದ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.10-ಸತ್ತ ಬೀದಿ ನಾಯಿ ಮೇಲೆ ವಿಷ ಹಾಕಿ ಆ ನಾಯಿಯನ್ನು ಚಿರತೆಗಳು ಸಂಚರಿಸುವ ಸ್ಥಳದಲ್ಲಿಟ್ಟಿದ್ದಾಗ ನಾಯಿಯನ್ನು ತಿಂದ 10 ವರ್ಷದ ಹೆಣ್ಣು ಚಿರತೆ ಜತೆಗೆ ಎಂಟು ತಿಂಗಳ ಎರಡು ಮರಿಗಳು ಸಹ ಮೃತಪಟ್ಟಿವೆ.

ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿರುವ ಚನ್ನಬಸಪ್ಪ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿದ ನಂಜನಗೂಡು ಆರ್‍ಎಫ್‍ಒ ಲೋಕೇಶ್ ಮೂರ್ತಿ ಸಿಬ್ಬಂದಿಗಳೊಂದಿಗೆ ಆಗಮಿಸಿದಾಗ ಮೂರು ಚಿರತೆಗಳು ಸಾವನ್ನಪ್ಪಿರುವುದನ್ನು ಕಂಡು ದಿಗ್ಭ್ರಮೆಗೊಂಡರು.

ಜಮೀನಿನ ಮಾಲೀಕ ಚನ್ನಬಸಪ್ಪ ನಾಪತ್ತೆಯಾಗಿದ್ದಾನೆ. ಚಿರತೆಗಳು ಸಾವನ್ನಪ್ಪಿರುವ ಸ್ಥಳಕ್ಕೆ ಮೈಸೂರು ಡಿಎಫ್‍ಒ ಅಲೆಗ್ಸಾಂಡರ್ ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿರತೆಗಳ ಸಾವಿಗೆ ಕಾರಣರಾಗಿರುವ ವ್ಯಕ್ತಿಗಳನ್ನು ಬಂಧಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments