ನಾಳೆಯಿಂದ ದಸರಾ ಯುವ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.16- ನಾಡಹಬ್ಬ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಯುವ ಸಂಭ್ರಮ ನಾಳೆಯಿಂದ ಆರಂಭವಾಗಲಿದ್ದು, ಮಾನಸಗಂಗೋತ್ರಿ ಸಜ್ಜಾಗಿದೆ. ನಗರದ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಯುವ ಸಂಭ್ರಮವು ಸೆ. 17ರಿಂದ 26ರ ವರೆಗೆ ಪ್ರತಿದಿನ ಸಂಜೆ ನಡೆಯಲಿದೆ.

ನಗರ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 250ಕ್ಕೂ ಹೆಚ್ಚು ಕಾಲೇಜುಗಳ ಸಾವಿರಾರು ಮಂದಿ ವಿದ್ಯಾರ್ಥಿಗಳು ನಾಡ ಕಲೆ, ಸಂಸ್ಕøತಿ ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ.

ಜಾನಪದ, ಪರಿಸರ, ಕನ್ನಡ ನಾಡಿನ ಸಂಸ್ಕøತಿ, ಅರಣ್ಯ ಸಂರಕ್ಷಣೆ, ಮಾನವ ನಿರ್ಮಿತ ಆಪತ್ತು, ಪೌರಾಣಿಕ, ರಾಷ್ಟ್ರೀಯ ಭಾವೈಕ್ಯತೆ, ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ವಿಷ್ಣುವಿನ ದಶಾವತಾರ, ರಾಮಾಯಣ ಸೇರಿದಂತೆ ಇನ್ನು ಹಲವು ವಿಷಯಗಳನ್ನಾಧರಿಸಿದ ಕಲೆ ಬಿಂಬಿಸುವ 8-10ನಿಮಿಷಗಳ ಸಾಂಸ್ಕøತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ತೆರೆದಿಡಲಿದ್ದಾರೆ.

ಈ ಕಾರ್ಯಕ್ರಮವು ಪ್ರತಿದಿನ ಸಂಜೆ 5.30ರಿಂದ ರಾತ್ರಿ 10ಗಂಟೆವರೆಗೆ ನಡೆಯಲಿವೆ. ಅತ್ಯುತ್ತಮ ಪ್ರದರ್ಶನ ನೀಡುವ ಕಾಲೇಜು ತಂಡವನ್ನು ಆಯ್ಕೆ ಮಾಡಲಾಗುವುದು.
ನಾಳೆಯಿಂದ ಆರಂಭವಾಗುವ ಯುವ ಸಂಭ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ, ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅವರು ಯುವ ಸಂಭ್ರಮದ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Facebook Comments