ನೀರಿಗಾಗಿ ಮೈಸೂರು ಪಾಲಿಕೆ ಸಭೆಯಲ್ಲಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು – ಮೈಸೂರು ಮಹಾ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ  ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆದಿದೆ. ಪಕ್ಷೇತರ ಸದಸ್ಯ ರಾಮಪ್ರಸಾದ್ ಅವರು ಬಿಳಿ ಟೋಪಿ ಹಾಕಿಕೊಂಡು ನೀರಿಗಾಗಿ ಕಣ್ಣೀರು ಎಂಬ ಫಲಕವನ್ನು ಹಾಕಿಕೊಂಡು ಖಾಲಿ ಬಿಂದಿಗೆ ಹಿಡಿದು ಮೇಯರ್ ಮುಂದೆ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಪಕ್ಷಬೇಧ ಮರೆತು ಬೇರೆ ಪಕ್ಷದವರು ಸಹ ತಮ್ಮ ವಾರ್ಡ್‍ನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಮೈಸೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಸುರಿದಿದ್ದರೂ ನಗರದಲ್ಲಿ ನೀರಿಗೆ ಕೊರತೆ ಯಾಗದು. ಹಾಗಿದ್ದರೂ ನಮ್ಮ ವಾರ್ಡ್‍ಗಳಿಗೆ ಏಕೆ ನೀರು ಪೂರೈಸುತ್ತಿಲ್ಲ ಎಂದು ಪ್ರಶ್ನಿಸಿದರು. ಚಾರ್ ಮೊಹಲ್ಲಾ, ಎನ್.ಆರ್. ಮೊಹಲ್ಲಾ, ಗೋಕುಲಂನಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ನಾವು ಜನತೆಗೆ ಉತ್ತರಿಸ ಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೇಯರ್ ಸದಸ್ಯರನ್ನು ಸಮಾಧಾನಪಡಿಸಿ ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಕೊಡಿಸುವುದಾಗಿ ಮನವೊ ಲಿಸಿದರು. ನಂತರ ಸಂಬಂಧಿತ ಅಧಿಕಾರಿಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಒದಗಿಸಿದರು.  ಮೇಯರ್‍ಗೆ ತರಾಟೆ: ಸ್ವಪಕ್ಷದ ಸದಸ್ಯರೇ ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಳೆದ ಹಲವಾರು ತಿಂಗಳಿನಿಂದ ನಗರದ ಯಾವುದೇ ವಾರ್ಡ್‍ನಲ್ಲಿ ಅಭಿವೃದ್ಧಿ ಕಾಮಗಾರಿ ಗಳು ಆಗುತ್ತಿಲ್ಲ ಏಕೆ ಎಂದು ಕೇಳಿದರೆ ನೀವು ಹಣವಿಲ್ಲ ಎಂದು ಹೇಳುತ್ತೀರ… ಅದೇ ರೀತಿ ಕೇಂದ್ರ, ರಾಜ್ಯ ಸರ್ಕಾರಗಳು ಹಣವಿಲ್ಲ ಎನ್ನುತ್ತಿದ್ದಾರೆ. ಹೀಗಾದರೆ ನಾವು ಜನರ ಬಳಿ ಹೇಗೆ ತಲೆ ಎತ್ತಿಕೊಂಡು ಹೋಗುವುದು ಎಂದು ಪ್ರಶ್ನಿಸಿದರಲ್ಲದೆ, ಸಾರ್ವಜನಿಕರು ಕಂದಾಯ ಕಟ್ಟುವುದು ಅಭಿವೃದ್ಧಿಗಾಗಿಯೇ. ಇಲ್ಲಿ ಅದೇ ಆಗದಿದ್ದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೆ ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದೆ. ಆಗ ಅವರ ಬಳಿ ಹೇಗೆ ಹೋಗುವುದು ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಕಿಡಿಕಾರಿದರು.

Facebook Comments