ಕುಡಿದು ಪೊಲೀಸರನ್ನು ನಿಂದಿಸಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.1- ಕುಡಿದ ಅಮಲಿನಲ್ಲಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಶರ್ಟ್ ಹರಿದ ಮೂವರನ್ನು ನಗರದ ಸರಸ್ವರತಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಕೊಪ್ಪಲಿನ ಮಹೇಶ್, ಜಯನಗರದ ಹೇಮಂತ್‍ಕುಮಾರ್, ಶ್ರೀರಾಮಪುರದ ದರ್ಶನ್ ಬಂಧಿತರು.  ಬಂಧಿತರು ನಿನ್ನೆ ರಾತ್ರಿ ಸರಸ್ವತಿಪುರಂ ಪಿಪಿಎಲ್ ಕಾಲೇಜು ಬಳಿ ಮದ್ಯಪಾನ ಸೇವಿಸುತ್ತಿದ್ದರು.

ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಇವರನ್ನು ಮನೆಗೆ ತೆರಳುವಂತೆ ಸೂಚಿಸಿದರೂ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಸಬ್‍ಇನ್‍ಸ್ಪೆಕ್ಟರ್ ಭದ್ರ ಅವರ ಮಾತನ್ನು ಕೇಳದೆ ಅವರನ್ನು ಕೂಡ ನಿಂದಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಪೊಲೀಸ್ ಕಾನ್‍ಸ್ಟೆಬಲ್ ಮಹದೇವ್ ಅವರ ಬಟ್ಟೆಯನ್ನು ಹರಿದು ಹಾಕಿದ್ದಾರೆ. ಪೊಲೀಸರು ಈ ಮೂವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Facebook Comments