ಒಂದೇ ತಿಂಗಳಿನಲ್ಲಿ ಮೈಸೂರು-ಬೆಂಗಳೂರುಗೆ ವಿಮಾನದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ. 25- ಒಂದೇ ತಿಂಗಳಿನಲ್ಲಿ ಮೈಸೂರು-ಬೆಂಗಳೂರು ನಡುವೆ ಸಾವಿರಕ್ಕೂ ಹೆಚ್ಚು ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಏರ್ ಇಂಡಿಯಾ ಅಂಗ ಸಂಸ್ಥೆ ಅಲೆಯನ್ಸ್ ಏರ್ ಜೂನ್ 7ರಿಂದ ಉಡಾನ್ ವಿಮಾನ ಸೇವೆಯನ್ನು ಆರಂಭಿಸಿದ್ದು, ಈ ಎರಡು ನಗರಗಳ ನಡುವೆ ಸಾವಿರಕ್ಕೂ ಹೆಚ್ಚು ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಎವಿಯೇಷನ್ ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನಿಂದ 605 ಮತ್ತು ಮೈಸೂರಿನಿಂದ 581 ಪ್ರಯಾಣಿಕರು ವಿಮಾನದಲ್ಲಿ ಮೈಸೂರು-ಬೆಂಗಳೂರು ಪ್ರಯಾಣಿಸಿದ್ದಾರೆ. ಮಂಗಳವಾರ ಮತ್ತು ಬುಧವಾರವನ್ನು ಹೊರತುಪಡಿಸಿ ವಾರದಲ್ಲಿ ಐದು ದಿನಗಳು 70ಆಸನಗಳ ಅಲೆಯನ್ಸ್ ಏರ್ ಈ ಎರಡು ನಗರಗಳ ನಡುವೆ ಕಾರ್ಯನಿರ್ವಹಿಸಿದೆ.

ಜೂನ್ ತಿಂಗಳಿನಲ್ಲಿ 3446 ಪ್ರಯಾಣಿಕರು ಚೆನ್ನೈ-ಮೈಸೂರು ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದರೆ 174 ಮಂದಿ ಪ್ರಯಾಣಿಕರು ವಿಜಯವಾಡಕ್ಕೆ 103 ಪ್ರಯಾಣಿಕರು ಮೈಸೂರಿನಿಂದ ವಿಶಾಖಪಟ್ಟಣಂಗೆ ಪ್ರಯಾಣಿಸಿದ್ದಾರೆ.

2017ರಿಂದ ಮೈಸೂರು ಮತ್ತು ಚೆನ್ನೈ ನಡುವೆ ಮಾತ್ರ ವಿಮಾನ ಸಂಚರಿಸಲಾಗಿತ್ತು. ಆದರೆ ಇದೀಗ ಕೇಂದ್ರದ ಉಡಾನ್-3 ಯೋಜನೆಯಂತೆ ಮೈಸೂರು ಹಾಗೂ ಬೆಂಗಳೂರು, ವಿಜಯವಾಡ- ವೈಜಾಗ್ ನಡುವೆ ವಿಮಾನಯಾನ ಆರಂಭವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ