ಮೈಸೂರು-ಬೆಂಗಳೂರು ರೈಲು ಸೇವೆ ಪುನರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂ.25- ರೈಲ್ವೆ ನಿಲ್ದಾಣದಿಂದ ಎಂದಿನಂತೆ ರೈಲುಗಳ ಸೇವೆ ಆರಂಭಗೊಂಡಿದೆ. ಯಾರ್ಡ್ ರೀ ಮಾಡಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ಹಲವಾರು ರೈಲುಗಳ ಸಂಚಾರ ಆರಂಭವಾಗಿದೆ.

ಜೂ.16 ರಿಂದ 23ರ ವರೆಗೆ ಪ್ರಧಾನ ಯಾರ್ಡ್‍ಗಳಲ್ಲಿ ತಾಂತ್ರಿಕ ಕಾಮಗಾರಿ ಕೈಗೊಂಡಿದ್ದ ಕಾರಣ 30 ರೈಲುಗಳನ್ನು ರದ್ದು ಮಾಡಲಾಗಿತ್ತು. ಅದರಲ್ಲಿ 15 ರೈಲುಗಳು ಭಾಗಶಃ ರದ್ದಾಗಿದ್ದವು.  ಇತರೆ ರೈಲುಗಳ ಮಾರ್ಗ ಬದಲಿಸಲಾಗಿತ್ತು. ಇನ್ನಿತರ ರೈಲು ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿತ್ತು.  ಕಾಮಗಾರಿ ಪೂರ್ಣಗೊಂಡಿರುವುದರಿಂದ ಇಂದಿನಿಂದ ಎಲ್ಲ ರೈಲುಗಳು ಎಂದಿನಂತೆ ಸಂಚರಿಸುತ್ತವೆ.

Facebook Comments