ಮೈಸೂರು ಪಾಲಿಕೆ ಸದಸ್ಯನ ಅಳಿಯನ ಮೇಲೆ ಹಲ್ಲೆ : ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.30- ಮೈಸೂರು ಮಹಾನಗರ ಪಾಲಿಕೆ ಸದಸ್ಯನ ಅಳಿಯನ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.  ಆರ್.ಟಿ.ನಗರದ ಷಾಹಿಲ್, ಗೌಸಿಯನಗರದ ಸುಹೇಲ್, ಬೆಂಗಳೂರಿನ ಗೌರಿಪಾಳ್ಯದ ಯದೌಸಲೀಮ, ಆವಲಹಳ್ಳಿ ಅಹಬೀಬ್ ಸುಖಾ ಬಂಧಿತ ಆರೋಪಿಗಳು.

ಬಂಧಿತರು ಮೈಸೂರು ಮಹಾನಗರ ಪಾಲಿಕೆ ಸದಸ್ಯ ಅಯಾಜ್ ಪಾಷ ಅವರ ಅಳಿಯ ಶಹಬಾಜ್ ಎಂಬುವರ ಮೇಲೆ ಮೇ.12ರಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಶಹಬಾಜ್ ಅವರ ಕೈ ತುಂಡಾಗಿತ್ತು. ಈ ಬಗ್ಗೆ ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಡಿಸಿಪಿ ಪ್ರಕಾಶ್‍ಗೌಡ ಹಾಗೂ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಠಾಣೆ ಇನ್‍ಸ್ಪೆಕ್ಟರ್ ಪೂಣಚ್ಛ, ಸಬ್‍ಇನ್‍ಸ್ಪೆಕ್ಟರ್ ಜಯಕೀರ್ತಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments