ಈಶ್ವರ ಕಾಡಿಗೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.10- ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಈಶ್ವರ ಆನೆಯನ್ನು ಕಾಡಿಗೆ ವಾಪಸ್ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೈಸೂರು ದಸರಾ ಗಜಪಡೆಯಲ್ಲಿ ಈಶ್ವರ ಆನೆಯನ್ನು ಕರೆ ತರಲಾಗಿದೆ. ಆದರೆ ತಾಲೀಮು ವೇಳೆ ಎರಡು ಬಾರಿ ಗಲಿಬಿಲಿಗೊಂಡಿತ್ತು.

ಇಂದು ಬೆಳಗ್ಗೆ ಅರಮನೆ ಮಾರ್ಗವಾಗಿ ಗಜಪಡೆಯನ್ನು ಕರೆ ತರುತ್ತಿದ್ದಾಗ ಈಶ್ವರ ಆನೆ ಗಾಬರಿಗೊಂಡಾಗ ಮಾವುತರು ಈಶ್ವರ ಆನೆಯ ದಂತ ಹಿಡಿದು ಕರೆತಂದಿದ್ದಾರೆ.
ಈ ಆನೆಯ ವರ್ತನೆ ಕಂಡು ಸಚಿವ ಸೋಮಣ್ಣ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈಶ್ವರ ಆನೆಯ ಪರ್ಯಾಯವಾಗಿ ಬೇರೆ ಆನೆ ಕರೆತರಲು ಅರಣ್ಯಾಧಿಕಾರಿಗಳು ಚಿಂತಿಸಿದ್ದಾರೆ.

Facebook Comments