ನಾಡಿನಿಂದ ಕಾಡಿನತ್ತ ದಸರಾ ಗಜಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.28- ಈ ಬಾರಿಯ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ ಗಜಪಡೆ ನಾಡಿನಿಂದ ಕಾಡಿಗೆ ತೆರಳಿತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ-ಸಂಪ್ರದಾಯದಂತೆ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಐದು ಆನೆಗಳನ್ನು ಮಾತ್ರ ಕಾಡಿನಿಂದ ಮೈಸೂರಿಗೆ ತರಲಾಗಿತ್ತು.

ಸೋಮವಾರ ವಿಜಯದಶಮಿ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ನಿನ್ನೆ ಆನೆಗಳಿಗೆ ವಿಶ್ರಾಂತಿ ನೀಡಿ ಇಂದು ಮೈಸೂರಿನಿಂದ ಕಾಡಿಗೆ ಕರೆದೊಯ್ಯಲಾಯಿತು. ಇಂದು ಬೆಳಗ್ಗೆ ಅರಮನೆ ಆವರಣದಲ್ಲಿ ಐದು ಆನೆಗಳಿಗೆ ಪೂಜೆ ಮಾಡಿ ಬೀಳ್ಕೊಡಲಾಯಿತು.

ಆನೆಗಳಾದ ವಿಕ್ರಮ, ಜ್ಯೋತಿ, ವಿಜಯ ಹಾಗೂ ಕಾವೇರಿ ಆನೆಗಳು ಅಕ್ಟೋಬರ್ 1ರಂದು ವೀರಹೊಸಹಳ್ಳಿಯಿಂದ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಆಗಮಿಸಿತ್ತು. ಅಕ್ಟೋಬರ್ 2ರಂದು ಅರಮನೆಗೆ ಬರಮಾಡಿಕೊಳ್ಳಲಾಗಿತ್ತು. ಇಂದು ಮತ್ತೆ ಆನೆಗಳನ್ನು ಕಾಡಿಗೆ ಕಳುಹಿಸಲಾಯಿತು.

Facebook Comments