ಮೈಸೂರಿನ ನಿಶ್ಚಯ್‍ಗೆ ಯಪಿಎಸ್‍ಸಿ 130ನೇ ರ‍್ಯಾಂಕ್‌

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.25- ಯಪಿಎಸ್‍ಸಿ ಪರೀಕ್ಷೆಯಲ್ಲಿ ಮೈಸೂರಿನ 24 ವರ್ಷದ ನಿಶ್ಚಯ್ ಪ್ರಸಾದ್ 130ನೇ ರ‍್ಯಾಂಕ್‌ ಗಳಿಸುವ ಮೂಲಕ ಅವರು ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ಕೆ.ಎಂ.ಪ್ರಸಾದ್ ಹಾಗೂ ಡಾ.ಗಾಯತ್ರಿ ಪುತ್ರರಾದ ಇವರು 2019ರಲ್ಸೆ ಎಂಜಿನಿಯರಿಂಗ್ ಮುಗಿಸಿದ್ದರು.

ತಂದೆ ಕೆ.ಎಂ.ಪ್ರಸಾದ್ ಗುತ್ತಿಗೆದಾರರಾಗಿದ್ದು, ತಾಯಿ ಡಾ.ಗಾಯತ್ರಿ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ನಿಶ್ಚಯ್, ಮರಿಮಲ್ಲಪ್ಪ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ನಂತರ ಎಸ್‍ಜೆಸಿಇ ಕಾಲೇಜಿನಲ್ಲಿ ಬಯೋಟೆಕ್ನಾಲಜಿಯಲ್ಲಿ ಪದವಿ ಪಡೆದರು.

ಎಸ್‍ಎಸ್‍ಎಲ್‍ಸಿಯಲ್ಲಿ 625ಕ್ಕೆ 621 ಅಂಕ, ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 590 ಅಂಕ ಗಳಿಸಿದ್ದ ನಿಶ್ಚಯ್ ಪ್ರಸಾದ್ ಪ್ರಸ್ತುತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಸ್ವಂತ ಶ್ರಮದಿಂದ ಓದಿ ಉತ್ತಮ ಸ್ಥಾನ ಗಳಿಸಿರುವ ಇವರು ರ‍್ಯಾಂಕ್‌ ಪಡೆದಿರುವುದಕ್ಕೆ ಸಂತಸ ಹಂಚಿಕೊಂಡಿದ್ದು, ಸಮಾಜ ಸೇವೆ ತನ್ನ ಗುರಿ ಎಂದು ಹೇಳಿದ್ದಾರೆ.

ಐಎಎಸ್ ಅಥವಾ ಐಪಿಎಸ್ ಯಾವುದೇ ಆಗಲಿ ಖುಷಿ ಕೊಡುತ್ತದೆ. ಜನರ ಸೇವಕನಾಗಿ ಕೆಲಸ ಮಾಡುತ್ತೇನೆ. ಇದು ಅಕಾರ ಅಲ್ಲ ಜವಾಬ್ದಾರಿ. ನನ್ನ ಸಾಧನೆಗೆ ಸ್ಪೂರ್ತಿ ತಂದೆ, ತಾಯಿ ಹಾಗೂ ಅಣ್ಣ ಎಂದಿದ್ದಾರೆ. ದೇಶದ ಯಾವುದೇ ಜಾಗದಲ್ಲಿ ಆದರೂ ಸೇವೆ ಸಲ್ಲಿಸಲು ತಾನು ಸಿದ್ಧನಿರುವುದಾಗಿ ಅವರು ತಿಳಿಸಿದ್ದಾರೆ.

Facebook Comments