ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವ, ಬಣ್ಣ ಬಣ್ಣದ ಹೂಗಳಿಂದ ಅಲಂಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಡಿ.25-ನಗರದ ಅರಮನೆಯಲ್ಲಿ ಹಮ್ಮಿಕೊಂಡಿರುವ ಮಾಗಿ ಉತ್ಸವ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಅರಮನೆಯನ್ನು ಪ್ರವೇಶಿಸುತ್ತಿದ್ದಂತೆ ವರಹಾಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಅಂದವಾಗಿ ನಿರ್ಮಿಸಲಾಗಿರುವ ಹೂದೋಟದ ನಡುವೆ ಬಣ್ಣ ಬಣ್ಣದ ಹೂಗಳಿಂದ ಅಲಂಕಾರಗೊಂಡಿರುವ ಸಿಂಹಾಸನಾರೂಢವಾದ ಜಯಚಾಮರಾಜ ಒಡೆಯರ್,

ಬೆಂಗಳೂರು ಅರಮನೆ, ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರು, ಜ್ಞಾನಭಂಗಿಯಲ್ಲಿ ಆಸೀನರಾಗಿರುವ ಸ್ವಾಮಿವಿವೇಕಾನಂದ, ನಿಂಬೆಹಣ್ಣಿನಿಂದ ನಿರ್ಮಿಸಿರುವ ಶಿವಲಿಂಗ, ಬಿಲ್ವಪತ್ರೆಯಿಂದ ಮಾಡಿರುವ ನಂದಿ ಪ್ರತಿಮೆಗಳು ಅತ್ಯದ್ಭುತವಾಗಿದ್ದು ಎಲ್ಲರನ್ನು ಆಕರ್ಷಿಸುತ್ತಿವೆ.

ಇನ್ನೊಂದೆಡೆ ವಾಯುಸೇನೆ, ಭೂಸೇನೆ, ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆ ಧ್ವಂಸಗೊಳಿಸಿದ್ದ ವೀರ ಅಭಿನಂದನ್ ಅವರ ಪ್ರತಿಮೆ ಆಯಸ್ಕಾಂತದಂತೆ ಸೆಳೆಯುತ್ತಿವೆ.ಈಗ ಮೈಸೂರು ಅರಮನೆಗಿಂತ ಈ ಸಸ್ಯಕಾಶಿ ಸೆಲ್ಫಿ ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ. ವಯಸ್ಸಿನ ಭೇದ ಮರೆತು ಎಲ್ಲರೂ ತಮಗಿಷ್ಟ ಬಂದ ಹೂವಿನ ಪ್ರತಿಮೆಗಳ ಬಳಿ ಸಾಗಿ ಸೆಲ್ಫಿ ತೆಗೆದುಕೊಂಡು ಸಾರ್ವಜನಿಕರು ಸಂಭ್ರಮಿಸುತ್ತಿದ್ದಾರೆ.

ಮಾಗಿ ಉತ್ಸವ ಜನವರಿ ಎರಡರವರಗೂ ಇರಲಿದೆ. ಜನರಿಗೆ ಉಚಿತ ಪ್ರವೇಶವಿರುವುದರಿಂದ ಸಾಗರೋಪಾದಿಯಲ್ಲಿ ಆಗಮಿಸಿ ಖುಷಿ ಪಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿನ್ನೆ ಸಂಜೆ ಉತ್ಸವಕ್ಕೆ ಚಾಲನ ನೀಡಿದರು. ಈ ವೇಳೆ ಕೆಲವು ಪ್ರತಿಮೆಗಳ ಬಳಿ ನಿಂತು ಫೋಟೋ ತೆಗೆಸಿಕೊಂಡರು.

Facebook Comments