ಮೈಸೂರಿನ ನಾಲ್ವರು ಪೋಲೀಸರ ಕೊರೊನಾ ವರದಿ ನೆಗೆಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.12- ಕೊರೊನಾ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ನಗರದ ಲಕ್ಷ್ಮಿಪುರಂ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಕೊರೊನಾ ಶಂಕೆ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‍ನಲ್ಲಿಡಲಾಗಿತ್ತು.

ಈ ನಾಲ್ವರು ಸಿಬ್ಬಂದಿ ಹೊಳೆ ನರಸೀಪುರದ ಸೋಂಕಿತ ಎಎಸ್‍ಐ ಒಬ್ಬರನ್ನು ಭೇಟಿ ಮಾಡಿದ್ರು. ಹಾಗಾಗಿ ಸೋಂಕು ತಗುಲಿರುವ ಸಾಧ್ಯತೆ ಇರಬಹುದು ಎಂಬ ಕಾರಣಕ್ಕೆ ಮುಂಜಾಗ್ರತೆಯಾಗಿ 14 ದಿನ ಕ್ವಾರಂಟೈನ್ ಮಾಡಲಾಗಿತ್ತು. ನಾಲ್ವರಿಗೂ ನೆಗೆಟಿವ್ ವರದಿ ಬಂದ ಕಾರಣ ಅವರು ಕ್ವಾರಂಟೈನ್‍ನಿಂದ ಹೊರಬಂದಿದ್ದು ಇದೀಗ ಕರ್ತವ್ಯಕ್ಕೂ ಹಾಜರಾಗಿದ್ದಾರೆ.

Facebook Comments