ಸಜೀವ ಗುಂಡು ನಾಪತ್ತೆ ಪ್ರಕರಣದಲ್ಲಿ ಹೆಡ್‍ ಕಸ್ಟೇಬಲ್ ಗೆ ನ್ಯಾಯಾಂಗ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.13- ಸಜೀವ ಗುಂಡು ನಾಪತ್ತೆ ಪ್ರಕರಣದಲ್ಲಿ ಬಂಧಿತನಾಗಿದ್ದ ಹೆಡ್‍ಕಾನ್ಸ್‍ಟೆಬಲ್‍ನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಟಿ.ನರಸೀಪುರ ಪೊಲೀಸ್ ಠಾಣೆಯ ಹೆಡ್‍ಕಾನ್ಸ್‍ಟೆಬಲ್ ಕೃಷ್ಣೇಗೌಡರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಟಿ.ನರಸೀಪುರ ಠಾಣೆಯಲ್ಲಿ 303 ಬಂದೂಕಿನ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದವು. ಇದರ ಸಂಬಂಧ ಕೃಷ್ಣೇಗೌಡರನ್ನು ಅಮಾನತುಪಡಿಸಲಾಗಿತ್ತು. ಅಲ್ಲದೆ ಅವರಿಂದ 30 ಗುಂಡುಗಳನ್ನು ವಶಪಡಿಸಕೊಳ್ಳಲಾಗಿತ್ತು.

ಉಳಿದ 20 ಗುಂಡುಗಳು ಇತ್ತೀಚೆಗೆ ನಂಜನಗೂಡಿನ ಕಪಿಲಾನದಿಯಲ್ಲಿ ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಕೃಷ್ಣೇಗೌಡರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

Facebook Comments