ಅಪರಿಚಿತ ಶವ ಪತ್ತೆ, ವಾರಸುದಾರರಿಗಾಗಿ ಪೊಲೀಸರ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.26-ದೊಡ್ಡ ಮೋರಿಯಲ್ಲಿ ದೊರೆತ ಅಪರಿಚಿತ ವ್ಯಕ್ತಿಯ ಶವದ ವಾರಸುದಾರರಿಗಾಗಿ ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಈ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆಯೇ ಅಥವಾ ಆಕಸ್ಮಿಕವಾಗಿ ಮೋರಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಕಳೆದ ಮಾ.3ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮೈಸೂರುನಗರ ಉದಯಗಿರಿ ಠಾಣೆ ಸರಹದ್ದಿನ ರಾಜೀವ್ ನಗರದ 2ನೇ ಹಂತದಲ್ಲಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪಕ್ಕದಲ್ಲಿರುವ ದೊಡ್ಡಮೋರಿಯಲ್ಲಿ ಸುಮಾರು 30-40 ವರ್ಷದ ಅಪರಿಚಿತ ಪುರಷನ ಶವ ಪತ್ತೆಯಾಗಿತ್ತು.

ದುಂಡುಮುಖ, ಎಣ್ಣೆಗಂಪು, ಮೈಬಣ್ಣ, ದೃಢಕಾಯ ಶರೀರವುಳ್ಳವರಾಗಿದ್ದು, ಶವ ಕೊಳೆತು ಊದಿಕೊಂಡಿದ್ದರಿಂದ ಗುರುತು ಪತ್ತೆಹಚ್ಚಲು ಸಾಧ್ಯವಾಗ್ಲಿಲ.
ಮೃತನ ಮೈಮೇಲೆ ಬಿಳಿ ಟೀ ಶರ್ಟ್ ಮಾದರಿಯ ಬನಿಯನ್, ಕಪ್ಪು ಉಡುದಾರ, ಬಲಗೈನಲ್ಲಿ ದಾರ ಇತ್ತು.

ಈ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಮೋರಿಯಲ್ಲಿ ಬಿಸಾಡಿದ್ದರೋ ಅಥವಾ ಆಕಸ್ಮಿಕವೋ ಇಲ್ಲವೇ ಬೇರೆ ಯಾವುದೇ ಕಾರಣಕ್ಕೆ ಮೋರಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಶವ ಕೊಳೆತು ಊದಿಕೊಂಡಿದ್ದರಿಂದ ನಿಯಮಾನುಸರ ದಫನ್ ಮಾಡಲಾಗಿದೆ.
ಸದರಿ ಪ್ರಕರಣದ ತನಿಖಾ ಕಾಲದಲ್ಲಿ ಮೃತನ ಸಹಜ ರೂಪವನ್ನು ತಿಳಿಯುವ ಸಲುವಾಗಿ ತನಿಖಾಧಿಕಾರಿಗಳು ನುರಿತ ಚಿತ್ರಕಾರರಿಂದ ಭಾವಚಿತ್ರದ ಫೋರ್ಟ್ ಟ್ರೇಡ್ ಮಾಡಿದ್ದಾರೆ.

ಈ ಮುಖಚಹರೆ ಹೋಲುವಂತಹ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಉದಯಗಿರಿ ಪೆÇಲೀಸ್ ಠಾಣೆ ದೂ: 0821-2418309 ಅಥವಾ ಇನ್‍ಸ್ಪೆಕ್ಟರ್ ಮೊಬೈಲ್ ಸಂಖ್ಯೆ 9480802234 ಸಂಪರ್ಕಿಸಲು ಕೋರಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ