ಮೈಸೂರು-ಚೆನ್ನೈ ನಡುವೆ ನಾಳೆಯಿಂದ ಪ್ರತಿನಿತ್ಯ ವಿಮಾನ ಹಾರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ನ.14-ಮೈಸೂರು- ಚೆನ್ನೈ ನಡುವೆ ಟ್ರೋ ಜೆಟ್ ಏರ್‍ಲೈನ್ಸ್ ಸಂಸ್ಥೆ ನಾಳೆಯಿಂದ ವಿಮಾನ ಹಾರಾಟವನ್ನು ಆರಂಭಿಸಲಿದೆ. ಉಡಾನ್ ಯೋಜನೇತರ ಪ್ರಥಮ ಟ್ರೋಜೆಟ್ ಎಟಿಆರ್ -72 ವಿಮಾನ ಶುಕ್ರವಾರದಿಂದ ಪ್ರತಿನಿತ್ಯ ಸಂಚಾರ ಪ್ರಾರಂಭ ಮಾಡಲಿದೆ.

ಚೆನ್ನೈನಿಂದ ಬೆಳಗ್ಗೆ6.50ಕ್ಕೆ ಹೊರಟು ಬೆಳಗ್ಗೆ 8.10ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.  ಅದೇ ವಿಮಾನವು ಬೆಳಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು 10 ಗಂಟೆಗೆ ಚೆನ್ನೈಗೆ ತಲುಪಲಿದೆ. ಸಂಜೆ ವೇಳೆ ಸಂಚರಿಸುವಂತೆ ಮೈಸೂರು-ಚೆನ್ನೈ ನಡುವಿನ ವಿಮಾನ ಹಾರಾಟಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದ ಹಿನ್ನೆಲೆಯಲ್ಲಿ ಟ್ರೋಜೆಟ್ ವಿಮಾನ ಪ್ರತಿನಿತ್ಯ ಬೆಳಗ್ಗೆ ತನ್ನ ಹಾರಾಟವನ್ನು ಆರಂಭಿಸುತ್ತಿದೆ.

Facebook Comments