2 ಕೋಟಿ ಮೌಲ್ಯದ ಒತ್ತುವರಿ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ,10- ಒತ್ತುವರಿಯಾಗಿದ್ದ ಸುಮಾರು ಎರಡು ಕೋಟಿ ಮೌಲ್ಯದ ಜಾಗವನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದ್ದಾರೆ, ನಗರದ ಬನ್ನಿಮಂಟಪ ರಸ್ತೆಯಲ್ಲಿರುವ ಖಾಲಿ ನಿವೇಶನಕ್ಕೆ ಪ್ರಭಾವಿಯೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನಧಿಕೃತಕಟ್ಟಡ ಕಟ್ಟಿಕೊಂಡು ಹಲವಾರು ವರ್ಷಗಳಿಂದ ಲಾರಿಟ್ರಾನ್ಸ್ ಪೋರ್ಟ್ ಕಚೇರಿ ಯಾಗಿಮಾಡಿಕೊಳ್ಳಲಾಗಿತ್ತು.

ಅಲ್ಲದೆ ನಿವೇಶನಕ್ಕೆ ತಂತಿ ಬೇಲಿಯನ್ನೂ ಸಹ ಅಳವಡಿಸಿ ಕೊಂಡಿದ್ದರು . ಇದರ ಬಗ್ಗೆ ಗಮನಹರಿಸಿದ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ಅವರ ನಿರ್ದೆಶನದಂತೆ ಅಧಿಕಾರಿ ಗಳು ಒತ್ತುವರಿ ಜಾಗವನ್ನು ತೆರವುಗೊಳಿಸಿ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅಧಿಕಾರಿ ನರೇಂದ್ರಬಾಬು ಸಹಾಯಕ ಅಭಿಯಂ ತರರಾದ ಶ್ರೀಮಣಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು,

Facebook Comments