ಮೈಸೂರು ಮೃಗಾಲಯ ಪ್ರವೇಶ ದರ ಏರಿಕೆಗೆ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.25- ಮೃಗಾಲಯದ ಪ್ರವೇಶ ದರದಲ್ಲಿ ಹೆಚ್ಚಳವಾಗಿರುವುದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಯಸ್ಕರಿಗೆ ಇದ್ದ 60 ರೂ. ದರವನ್ನು 80 ರೂ.ಗೆ ಏರಿಸಲಾಗಿದೆ. ವಾರಾಂತ್ಯದಲ್ಲಿ ಇದ್ದ 80. ರೂ.ಗಳನ್ನು 100 ರೂ.ಗೆ ಏರಿಸಲಾಗಿದೆ.

ಮಕ್ಕಳಿಗೆ ಸಾಮಾನ್ಯ ದಿನಗಳಲ್ಲಿ 40 ರೂ. ಇದದ್ದನ್ನು 50 ರೂ.ಗೆ ಏರಿಸಿದ್ದು, ವಾರಾಂತ್ಯದಲ್ಲಿ ಅಷ್ಟೇ ದರವನ್ನು ವಿಧಿಸುತ್ತಿದ್ದಾರೆ. ಆದರೆ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತವಾಗಿದೆ.

ದೇಶ-ವಿದೇಶದಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದು, ಸಾಕಷ್ಟು ಉತ್ತಮ ಆದಾಯವಿದ್ದರೂ ಮೃಗಾಲಯ ಆಡಳಿತ ಮಂಡಳಿಯ ದರ ಏರಿಕೆ ನಿರ್ಧಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದು, ಅದರ ನಿರ್ವಹಣೆ ವೆಚ್ಚವನ್ನು ಸರಿದೂಗಿಸಲು ಮೃಗಾಲಯದ ಆಡಳಿತ ಮಂಡಳಿ ದರ ಏರಿಕೆ ಮಾಡಿದೆ ಎಂದು ಹೇಳಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ