ಈ ಬಾರಿಯ ದಸರಾ ಸ್ವಾಗತಕ್ಕೆ ವಿಶೇಷ ದೀಪ ಅಲಂಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.18- ಈ ಬಾರಿಯ ದಸರಾವನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಲು ಹಲವು ಯೋಜನೆಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ. ಮೈಸೂರು ದಸರಾಕ್ಕಾಗಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ 20 ಅಡಿ ದೀಪಾಲೆ ಕಂಬವನ್ನು ಮೈಸೂರು-ಬೆಂಗಳುರು ಟೋಲ್‍ಗೇಟ್ ಬಳಿ ಹಾಕಿ ಸ್ವಾಗತ ಕೋರಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ 20 ಅಡಿ ಎತ್ತರದ ದೀಪಾಲೆ ಕಂಬವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಾಡಿಸಿ ಮೈಸೂರಿಗೆ ತರಿಸಲಾಗುತ್ತಿದೆ. ಇದಕ್ಕಾಗಿ 2.50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಈ ಬಾರಿ ಪಶ್ಚಿಮ ಬಂಗಾಳ ಮಾದರಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತಿದೆ.  ಈಗಾಗಲೇ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ದೀಪಗಳನ್ನು ಅಳವಡಿಸುವ ಕಾಮಗಾರಿ ಬರದಿಂದ ಸಾಗಿದೆ.

ಅಂಬಾರಿ ಹೊತ್ತ ಆನೆ, ಹಂಪಿ ಕಲ್ಲಿನ ರಥ, ದರ್ಪಣ ಸುಂದರಿ, ಕೆಆರ್‍ಎಸ್ ಅಣೆಕಟ್ಟೆ, ಚಾಮುಂಡೇಶ್ವರಿ ದೇವಿ, ಪಾರ್ಲಿಮೆಂಟ್ ಭವನ, ಮೈಸೂರು ಅರಮನೆ ಸೇರಿದಂತೆ ಇನ್ನೂ ಹಲವಾರು ಮಾದರಿಯ ಪ್ರತಿಕೃತಿಗಳನ್ನು ವಿದ್ಯುತ್ ದೀಪಗಳಿಂದ ಮಾಡಿ ಹಲವು ಸ್ಥಳಗಳಲ್ಲಿ ಹಾಕಲಾಗುತ್ತದೆ.

Facebook Comments