ದಸರಾ : ಅರಮನೆ ಸ್ವಚ್ಛತೆ -ವಿದ್ಯುತ್ ದೀಪಗಳ ದುರಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.24- ದಸರಾ ಹಿನ್ನಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ ವಿದ್ಯೂತ್ ದೀಪಗಳ ದುರಸ್ಥಿ ಮತ್ತು ಬಲ್ಬ್ ಗಳ ಬದಲಾವಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಅದ್ದೂರಿಯಾಗಿ ದಸರಾ ನಡೆಯುತ್ತಿದ್ದು, ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ.

ದಸರಾ ಮಹೋತ್ಸವವು ಮೈಸೂರು ಅರಮನೆ ಮತ್ತು ಚಾಮುಂಡಿ ಬೆಟ್ಟದಲ್ಲಿ ಮಾತ್ರ ಈ ವರ್ಷ ನಡೆಯಲಿದೆ. ಹೀಗಾಗಿ ಅರಮನೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಅವರಮನೆಯಲ್ಲಿನ ವಿದ್ಯೂತ್ ದೀಪಗಳ ದುರಸ್ಥಿ ಸೇರಿದಂತೆ ವಿವಿಧ ಕಾಮಗಾರಿಗಳು, ಅರಮನೆಯಲ್ಲಿರುವ ತೂಗು ದೀಪಗಳು , ಖಾಸಾಗಿ ದರ್ಬಾರ್ ಹಾಗೂ ಕಲ್ಯಾಣ ಮಂಟಪದಲ್ಲಿನ ಅಲಂಕಾರಿಕ ವಿದ್ಯೂತ್ ದೀಪಗಳ ದುರಸ್ತಿ ನಡೆಸಲಾಗುತ್ತಿದೆ.  ಹಾಗೆಯೇ ಅರಮನೆ ಸುತ್ತಮುತ್ತ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ.

Facebook Comments