ಮೈಸೂರು ಸೀಲ್‍ಡೌನ್‍ಗೆ ಜಿಲ್ಲಾಡಳಿತ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.10- ಜಿಲ್ಲಾಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೀಲ್‍ಡೌನ್‍ಗೆ ಸಿದ್ಧತೆ ಮಾಡಲಾಗುತ್ತಿದೆ. ಮೈಸೂರಿನಲ್ಲಿ ಒಂದು ಕಡೆ ಜ್ಯುಬಿಲಿಯಂಟ್ ಕಾರ್ಖಾನೆ, ಇನ್ನೊಂದೆಡೆ ತಬ್ಲೀಘಿಯಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೀಲ್‍ಡೌನ್ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ.

ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಯಿತು. ಮಹದೇವಪುರ ರಸ್ತೆ, ಪುಲಿಕೇಶಿ ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗುತ್ತಿದೆ. ಮನೆಯಿಂದ ಹೊರ ಬರುವ ಜನರಿಗೆ ಬೆಳಗಿನಿಂದಲೇ ಖಡಕ್ ಎಚ್ಚರಿಕೆ ನೀಡಿ ಹೊರಬರದಂತೆ ಪೊಲೀಸರು ಸೂಚಿಸಿದರು.

ಅಲ್ಲದೆ, ಹೊರಬಂದ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಒಂದು ವೇಳೆ ಮನೆಯಿಂದ ಹೊರಬಂದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಡ್ರೋಣ್ ಮೂಲಕ ಮಾಹಿತಿ ಸಂಗ್ರಹಿಸಿ ವಾಹನ ಸವಾರರ ವಿರುದ್ಧ ಹೆಚ್ಚು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ.

Facebook Comments