ದಸರಾ ವೇಳೆ ಪ್ರವಾಸಿಗರ ಬಾಯಲ್ಲಿ ನೀರೂರಿಸಲಿವೆ ಬಗೆಬಗೆಯ ಖಾದ್ಯಗಳು

ಈ ಸುದ್ದಿಯನ್ನು ಶೇರ್ ಮಾಡಿ

Food--01

ಮೈಸೂರು, ಸೆ.21- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನರ ಅಭಿರುಚಿಗೆ ತಕ್ಕಂತೆ ವಿವಿಧ ಖಾದ್ಯಗಳನ್ನು ಪರಿಚಯಿಸಲು ಆಹಾರ ಇಲಾಖೆ ಮುಂದಾಗಿದೆ. ದಸರಾ ಅಂಗವಾಗಿ ಆಯೋಜಿಸಲಾಗುವ ದಸರಾ ಆಹಾರ ಮೇಳ ಎರಡು ಸ್ಥಳಗಳಲ್ಲಿ ನಡೆಯಲಿದೆ. ನಗರದ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೆಸ್ ಹೊಟೇಲ್ ಬಳಿ ಇರುವ ಮೂಡಾ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ವಿದೇಶಿಗರೂ ಆಹಾರ ಮೇಳದಲ್ಲಿ ಭಾಗವಹಿಸಲಿದ್ದಾರೆ.   ಆಹಾರ ಮೇಳದಲ್ಲಿ ಅಂತಾರಾಷ್ಟ್ರೀಯ ಆಹಾರ ಪದ್ಧತಿ, ಚೈನೀಸ್, ಟಿಬೆಟಿಯನ್, ಇಟಾಲಿಯನ್, ಅಮೆರಿಕ, ಫ್ರೆಂಚ್ ಹಾಗೂ ಆಫ್ರಿಕಾ ಆಹಾರ ಪದ್ಧತಿಯನ್ನು ಪ್ರವಾಸಿಗರು ಸವಿಯಬಹುದಾಗಿದೆ.

ಮೈಸೂರು ವಿವಿಯಲ್ಲಿರುವ ವಿದ್ಯಾರ್ಥಿಗಳಿಗೆ ಅಡುಗೆ ಹಾಗೂ ಮಳಿಗೆ ತಯಾರಿಸಲು ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆಹಾರ ಮೇಳದ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲಿ ಬೊಂಬಾಟ್ ಭೋಜನ ಕಾರ್ಯಕ್ರಮದ ಖ್ಯಾತಿಯ ಸಿಹಿ ಕಹಿ ಚಂದ್ರು, ಭಾನುವಾರ ಬಾಡೂಟ ಖ್ಯಾತಿಯ ರಾಜೇಶ್‍ಗೌಡ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಸಹ ಆಹಾರ ಮೇಳದಲ್ಲಿ ಭಾಗವಹಿಸಲಿದ್ದಾರೆ.

ಆಹಾರ ಮೇಳದಲ್ಲಿ ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗುತ್ತದೆ. ಆಹಾರ ಮೇಳದಲ್ಲಿ ಗ್ರಾಮೀಣ ಮತ್ತು ಪಾರಂಪರಿಕ ಶೈಲಿಗಳು, ಸಿರಿಧಾನ್ಯ, ಸಾವಯವ ಕೃಷಿ ಅಡುಗೆಗಳು, ದಕ್ಷಿಣ ಹಾಗೂ ಉತ್ತರ ಕರ್ನಾ ಟಕದ ಆಹಾರ ಪದ್ಧತಿ, ರಾಜಸ್ಥಾನಿ, ಪಂಜಾಬಿ, ಆಂಧ್ರ, ಕೇರಳ, ತಮಿಳುನಾಡು ಶೈಲಿಯಲ್ಲಿ ಸಸ್ಯಾಹಾರ ಹಾಗೂ ಶಾಖಾಹಾರ ಪದ್ಧತಿಯ ಆಹಾರಗಳನ್ನು ಭೋಜನ ಪ್ರಿಯರು ಸವಿಯಬಹುದಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin