‘ದಾಖಲೆ’ ಯೋಗಕ್ಕೆ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಭರ್ಜರಿ ತಾಲೀಮು

ಈ ಸುದ್ದಿಯನ್ನು ಶೇರ್ ಮಾಡಿ

Mysuru-Yoga--01

ಮೈಸೂರು, ಜೂ.17- ಈ ಬಾರಿಯೂ ಯೋಗ ದಿನಾಚರಣೆಯಂದು ಮೈಸೂರು ಗಿನ್ನಿಸ್ ದಾಖಲೆ ಮಾಡಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ನಗರದ ರೇಸ್‍ಕೋರ್ಸ್ ಆವರಣದಲ್ಲಿಂದು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.

ಕಳೆದ ಬಾರಿ 54 ಸಾವಿರ ಯೋಗ ಪಟುಗಳು ಭಾಗವಹಿಸಿ ಮೈಸೂರು ಗಿನ್ನಿಸ್ ದಾಖಲೆ ಮಾಡಿದ್ದರು. ಈ ಬಾರಿ 75 ಸಾವಿರಕ್ಕೂ ಹೆಚ್ಚು ಮಂದಿ ಯೋಗ ಪಟುಗಳು ಭಾಗವಹಿಸುವ ಮೂಲಕ ಮತ್ತೊಂದು ದಾಖಲೆ ಬರೆಯಲು ಸಾಂಸ್ಕøತಿಕ ನಗರಿ ಸಜ್ಜಾಗುತ್ತಿದೆ. ನನಗೆ ಇದು ಅತ್ಯಂತ ಸಂತಸ ತಂದಿದೆ ಎಂದರು.
ಈ ಬಾರಿ ಯೋಗ ದಿನಾಚರಣೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ನಗರದಾದ್ಯಂತ ಇರುವ ಯೋಗ ಶಾಲೆಗಳ ಯೋಗಪಟುಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ರೇಸ್‍ಕೋರ್ಸ್ ಆವರಣದಲ್ಲಿ ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಮಾಡಲಾಗಿದ್ದು, ಉಚಿತ ಪ್ರವೇಶ ವಿರುತ್ತದೆ. ಯೋಗಪಟುಗಳನ್ನು ಎಣಿಕೆ ಮಾಡಲು ದ್ವಾರದಲ್ಲೇ ಎಣಿಕಾ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು, ಜಿಲ್ಲೆಯ ಜನರು ಕೂಡಾ ಜೂ.21ರಂದು ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅಂದೇ ಸ್ಥಳದಲ್ಲಿ ಹೆಸರು ದಾಖಲಿಸಬಹುದು. ಜತೆಗೆ ಆನ್‍ಲೈನ್ ಮೂಲಕವೂ ಹೆಸರು ದಾಖಲಿಸ ಬಹುದಾಗಿದೆ. ಇಂದು ಯೋಗ ತಾಲೀಮಿನಲ್ಲಿ ಶಸಕರಾದ ರಾಮದಾಸ್, ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Facebook Comments

Sri Raghav

Admin