ಅತ್ತೆ ಮಗಳು ಕೈಕೊಟ್ಟಿದ್ದಕ್ಕೆ ವಿಷ ಕುಡಿದು ಯುವಕ ಆತ್ಮಹತ್ಯೆ
ಈ ಸುದ್ದಿಯನ್ನು ಶೇರ್ ಮಾಡಿ
ಮೈಸೂರು,ಜು.4- ಅತ್ತೆ ಮಗಳು ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಪಡುವಾರಳ್ಳಿ ನಿವಾಸಿ ಸತೀಶ್ (23) ಮೃತಪಟ್ಟ ಯುವಕ. ಪಡುವಾರಳ್ಳಿಯಲ್ಲಿ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತೀಶ ತನ್ನ ಅತ್ತೆ ಮಗಳನ್ನು ವಿವಾಹವಾಗಲು ನಿಶ್ಚಿಯಿಸಿದ್ದ. ಆದರೆ ಅತ್ತೆ ಮಗಳು ಬೇರೆ ಯುವಕನೊಂದಿಗೆ ವಿವಾಹವಾದ ಹಿನ್ನೆಲೆಯಲ್ಲಿ ಮನನೊಂದು ಕಳೆದ ಒಂದು ವಾರದ ಹಿಂದೆಯೇ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ.
ಕೂಡಲೇ ಮನೆಯವರು ಆತನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಜಯಲಕ್ಷ್ಮಿಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Facebook Comments