ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ಜೆಡಿಎಸ್ ತೆಕ್ಕೆಗೆ ಜಾರಿದ ಮೈಸೂರು ಮೇಯರ್ ಪಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.24- ಕೊನೆ ಗಳಿಗೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಪುನಃ ಜೆಡಿಎಸ್ ತೆಕ್ಕೆಗೆ ಬಿದ್ದಿದೆ.ಬಿಜೆಪಿ, ಕಾಂಗ್ರೆಸ್‍ನಿಂದ ನಡೆದ ಕೊನೆ ಗಳಿಗೆಯ ಕಸರತ್ತು ಕೈಕೊಟ್ಟಿದ್ದು, ಜೆಡಿಎಸ್‍ನ ರುಕ್ಮಿಣಿ ಮಾದೇಗೌಡ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ನಿನ್ನೆ ಸಂಜೆಯಿಂದಲೇ ಮೂರೂ ಪಕ್ಷಗಳಿಗೆ ಬಹುಮತವಿಲ್ಲದ ಕಾರಣ ಮೈತ್ರಿಗೆ ನಾನಾ ಕಸರತ್ತುಗಳು ನಡೆದಿದ್ದವು.

ಇದಕ್ಕಾಗಿ ಇಂದು ಬೆಳಗ್ಗೆ ಹಲವು ಬೆಳವಣಿಗೆಗಳು ನಡೆದು ಬಿಜೆಪಿಗೆ ಮೇಯರ್ ಪಟ್ಟ ಸಿಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅಂತಿಮವಾಗಿ ಕಾಂಗ್ರೆಸ್ ಮತ್ತೊಂದು ದಾಳ ಉರುಳಿಸಿ ಜೆಡಿಎಸ್‍ಗೆ ಬೆಂಬಲ ನೀಡುವ ಮೂಲಕ ಕಮಲ ಪಡೆಗೆ ಶಾಕ್ ನೀಡಿದೆ.

ಒಟ್ಟು 73 ಮತಗಳಲ್ಲಿ 43 ಮತಗಳನ್ನು ಪಡೆಯುವ ಮೂಲಕ ರುಕ್ಮಿಣಿ ಮಾದೇಗೌಡ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಸ್ಥಾನ ಕಾಂಗ್ರೆಸ್‍ನ ಅನ್ವರ್ ಬೇಗ್ ಅವರಿಗೆ ಒಲಿದಿದೆ.

Facebook Comments

Sri Raghav

Admin