ಅರಮನೆಯಲ್ಲಿ 18ರಂದು ಸಿಂಹಾಸನಾ ಜೋಡಣೆ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.16- ನಾಡ ಹಬ್ಬ ದಸರಾ ಅಂಗವಾಗಿ ಮೈಸೂರು ಅರಮನೆಯಲ್ಲಿ ಖಾಸಗಿ ದಸರಾ ಹಿನ್ನೆಲೆಯಲ್ಲಿ ಸಿಂಹಾಸನಾ ಜೋಡಣಾ ಕಾರ್ಯ ಸೆ.18ರಂದು ನಡೆಯಲಿದೆ.

ಮೈಸೂರು ಅರಮನೆಯ ಸ್ಟ್ರಾಂಗ್ ರೂಂನಲ್ಲಿ ರುವ ರತ್ನ ಖಚಿತ ಸಿಂಹಾಸನವನ್ನು ಬಿಗಿ ಭದ್ರತೆಯಲ್ಲಿ ಹೊರತೆಗೆದು ದರ್ಬಾರ್ ಹಾಲ್‍ನಲ್ಲಿ ಜೋಡಿಸುವ ಪ್ರಕ್ರಿಯೆ ನಡೆಯಲಿದೆ.

ಸೆ.18ರಂದು ಬೆಳಗ್ಗೆ 6.30ರಿಂದ ವಿವಿಧ ಧಾರ್ಮಿಕ ಸೇವಾ ಕಾರ್ಯಗಳು ಆರಂಬವಾಗಲಿದೆ. ಆನಂತರ 8.30ರಿಂದ 12.30ರವರೆಗೆ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ.

ಅಂದು ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ, ಶಾಂತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಜೋಡಣಾ ಕಾರ್ಯ ನಡೆಯಲಿದೆ.

Facebook Comments