ಮೈಸೂರು-ಹೈದ್ರಾಬಾದ್‍ಗೆ ಮತ್ತೊಂದು ವಿಮಾನ ಮಾನ ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.28- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಸಂಸ್ಥೆ ಮೈಸೂರು-ಹೈದ್ರಾಬಾದ್ ನಡುವೆ ನೂತನ ವಿಮಾನ ಸಂಚಾರ ಆರಂಭಿಸಿದೆ. ಈ ವಿಮಾನ ಸಂಚಾರ ಮೈಸೂರು-ಮಂಡಕಳ್ಳಿ ವಿಮಾನ ನಿಲ್ದಾಣದಿಂದ ರಾತ್ರಿ ಆರಂಭಗೊಂಡಿದೆ.

ಸಂಸದ ಪ್ರತಾಪ್‍ಸಿಂಹ ಮೈಸೂರು-ಹೈದ್ರಾಬಾದ್ ನಡುವಿನ ನೂತನ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು. ಈ ನೂತನ ವಿಮಾನದಲ್ಲಿ ಮೊದಲ ಪ್ರಯಾಣಿಕರಾಗಿ ಮೈಸೂರಿನಿಂದ – ಹೈದ್ರಾಬಾದ್‍ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತೆರಳಿದರು.

ಈ ವಿಮಾನ ಮೈಸೂರಿನಿಂದ ರಾತ್ರಿ 7.40ಕ್ಕೆ ಹೊರಟು ಹೈದ್ರಾಬಾದನ್ನು 9.27ಕ್ಕೆ ತಲುಪಲಿದೆ. ಈ ಮಾರ್ಗವಾಗಿ ಸಂಚರಿಸುತ್ತಿರುವ ಎರಡನೇ ವಿಮಾನ ಇದಾಗಿದೆ. ಟ್ರೂ-ಗೆಟ್ ಸಂಸ್ಥೆ ಈಗಾಗಲೇ ಮೈಸೂರು- ಹೈದ್ರಾಬಾದ್ ನಡುವೆ ವಿಮಾನ ಸಂಚಾರ ಆರಂಭಿಸಿದ್ದು, ಇದು ಎರಡನೇ ವಿಮಾನವಾಗಿದೆ.

ಈ ಸಂದರ್ಭದಲ್ಲಿ ಟ್ರಾವಲ್ ಅಸೋಸಿಯೇಷನ್ ಅಧ್ಯಕ್ಷ ಜಯಕುಮಾರ್, ಮೈಸೂರು ಛೇಂಬರ್ ಆಫ್ ಕಾಮರ್ಸ್‍ನ ಸತೀಶ್, ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ಧೇಶಕ ಮಂಜುನಾಥ್ ಪಾಲ್ಗೊಂಡಿದ್ದರು.

Facebook Comments

Sri Raghav

Admin