ಮೈತ್ರಿ ಸರ್ಕಾರಕ್ಕೆ ನನ್ನ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮುಂದುವರೆಸುವುದಾಗಿ ಮಾಜಿ ಸಚಿವ ಎನ್.ಮಹೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬಿಎಸ್‍ಪಿ ಶಾಸಕರಾಗಿದ್ದು, ನಮ್ಮ ಪಕ್ಷದ ಬೆಂಬಲ ಮೈತ್ರಿ ಸರ್ಕಾರಕ್ಕೆ ಎಂದರು.

ತಾವು ವಿಧಾನಸಭೆ ಕಾರ್ಯದರ್ಶಿ ಅವರನ್ನು ಭೇಟಿ ಮಾಡಲು ಆಗಮಿಸಿದ್ದು, ಅದೇ ವೇಳೆಯಲ್ಲಿ ಬಿಜೆಪಿ ಶಾಸಕರು ಇದ್ದದ್ದು ಆಕಸ್ಮಿಕ ಅಷ್ಟೆ. ಬಿಜೆಪಿಯವರ್ಯಾರೂ ತಮ್ಮನ್ನು ಸಂಪರ್ಕಿಸಿ. ರಾಜ್ಯದ ರಾಜಕೀಯದಲ್ಲಿ ಇಂತಹ ಪರಿಸ್ಥಿತಿ ಎದುರಾಗಬಾರದಿತ್ತು.

ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಯಾರಿಗೂ ಮತ ಹಾಕದೆ ಮತಪೆಟ್ಟಿಗೆಗಳನ್ನು ವಾಪಸ್ ಕಳುಹಿಸಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದರು.

Facebook Comments

Sri Raghav

Admin