ಬಿಬಿಎಂಪಿ ಸದಸ್ಯನಿಂದಲೇ 18 ಕೋಟಿ ಮೌಲ್ಯದ ಆಸ್ತಿ ಕಬಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.4- ಕೆಜಿಹಳ್ಳಿ-ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಕೇಳಿಬಂದಿರುವ ಹೆಸರಿನ ಪುಲಿಕೇಶಿನಗರ ವಾರ್ಡ್ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಮತ್ತು ಅವರ ಪಾಲುದಾರರು 18 ಕೋಟಿ ಮೌಲ್ಯದ ಪಾಲಿಕೆಯ ಎರಡು ಆಸ್ತಿಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿರುವ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು, ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್, ಎಸಿಬಿ ಮತ್ತು ಬಿಎಂಟಿಎಫ್‍ಗೆ ದೂರು ನೀಡಿದ್ದಾರೆ.

ದೂರು ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್.ಆರ್.ರಮೇಶ್, ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಪ್ರೇಜರ್‍ಟೌನ್‍ನ ಹೇನ್ಸ್ ರಸ್ತೆಗೆ ಹೊಂದಿಕೊಂಡಿರುವ ಬಂಬೂಬಜಾರ್ ರಸ್ತೆಯಲ್ಲಿರುವ 18 ಕೋಟಿಗೂ ಹೆಚ್ಚು ಮೌಲ್ಯದ ಬಿಬಿಎಂಪಿ ಎರಡು ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವುದಲ್ಲದೆ ಆ ಸ್ವತ್ತಿನಲ್ಲಿ ಅಬ್ದುಲ್ ರಕೀಬ್ ಜಾಕೀರ್ ಮತ್ತು ಅವರ ಪಾಲುದಾರರು ವಸತಿ ಸಂಕೀರ್ಣ ಮತ್ತು ಕಲ್ಯಾಣ ಮಂಟಪ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಈ ಹಗರಣಗಳಿಗೆ ಸಂಬಂಧಿಸಿದ 345 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.  ಫ್ರೇಜರ್ ಟೌನ್ ಬಡಾವಣೆಯ ಹೇನ್ಸ್ ರಸ್ತೆಯಲ್ಲಿರುವ 1750 ಚ. ಅಡಿ ವಿಸ್ತೀರ್ಣದ 25/2-1 ಸಂಖ್ಯೆಯ ಸ್ವತ್ತನ್ನು ಪಾಲಿಕೆ ಸದಸ್ಯರಾಗಿದ್ದ ಮತ್ತು ಅತಿ ಬಡತನದ ಸ್ಥಿತಿಯಲ್ಲಿದ್ದ ಪಾಂಡ್ಯನ್ ಅವರಿಗೆ 1983-84ರಲ್ಲಿ 50 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು.

ಹೇನ್ಸ್ ರಸ್ತೆಯ 2,760 ಚ.ಅಡಿ ವಿಸ್ತೀರ್ಣದ 25/1 ಸಂಖ್ಯೆಯ ಸ್ವತ್ತನ್ನು ಕಾಂಗ್ರೆಸ್(ಐ) ಪಕ್ಷದ ಮುಖಂಡರಾಗಿದ್ದ ವಿ.ರಾಮಾಂಜಲು ನಾಯ್ಡು ಅವರಿಗೆ 1963-64ರಲ್ಲಿ 99 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು. ಪಾಲಿಕೆಯ 18 ಕೋಟಿ ಮËಲ್ಯದ ಎರಡೂ ಸ್ವತ್ತುಗಳನ್ನು ವ್ಯವಸ್ಥಿತವಾಗಿ ತನ್ನದಾಗಿಸಿಕೊಂಡಿರುವ ವಾರ್ಡ್ ಸಂಖ್ಯೆ – 78 ರ ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜÁಕೀರ್ ಮತ್ತವರ ಪಾಲುದಾರರು ಕಬಳಿಸಿದ್ದಾರೆ ಎಂದು ದೂರಿದರು.

ದಿವಂಗತ ಪಾಂಡ್ಯನ್ ಅವರ ಧರ್ಮಪತ್ನಿಗೆ 50 ವರ್ಷಗಳ ಅವಧಿಯ ಗುತ್ತಿಗೆಗೆ ನೀಡಲಾಗಿದ್ದ ಪಾಲಿಕೆಯ ಸ್ವತ್ತಿನಲ್ಲಿ 7 ಅಂತಸ್ತುಗಳ ವಸತಿ ಸಂಕೀರ್ಣವನ್ನು ಹಾಗೂ ವಿ.ರಾಮಾಂಜಲು ನಾಯ್ಡು ಅವರಿಗೆ 99 ವರ್ಷಗಳ ಅವಧಿಯ ಗುತ್ತಿಗೆಗೆ ನೀಡಲಾಗಿದ್ದ ಪಾಲಿಕೆಯ ಸ್ವತ್ತಿನಲ್ಲಿ 07 ಅಂತಸ್ತುಗಳ ವಾಣಿಜ್ಯ ಕಟ್ಟಡವನ್ನು ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜÁಕೀರ್ ಮತ್ತು ಅವರ ಪಾಲುದಾರರು ನಿರ್ಮಿಸುತ್ತಿದ್ದಾರೆ.

1971-74 ರ ಅವಧಿಯಲ್ಲಿ ಬೆಂಗಳೂರು ಸಿಟಿ ಕಾಪೆರ್ರೇಷನ್ ಡಿವಿಜನ್ ಸಂಖ್ಯೆ – 34 ರಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಪಾಂಡ್ಯನ್ ಅವರ ಧರ್ಮಪತ್ನಿ ಬೇಬಿಯಮ್ಮ ಅವರಿಗೆ 1983-84ರಲ್ಲಿ ಫ್ರೇಜರ್ ಟೌನ್ ಬಡಾವಣೆಯ ಹೇನ್ಸ್ ರಸ್ತೆಯಲ್ಲಿರುವ 1750 ಚ. ಅಡಿ ವಿಸ್ತೀರ್ಣದ ಸ್ವತ್ತಿನ ಸಂಖ್ಯೆ – 25/2-1 ಅನ್ನು 50 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು.

ಬೇಬಿಯಮ್ಮ ಅವರಿಗೆ ಮಾರಾಟದ ಕ್ರಯಪತ್ರ ಮಾಡಿಕೊಟ್ಟಿರುವ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಜಂಟಿ ಆಯುಕ್ತರಾಗಿದ್ದ ಮತ್ತು ಹಲವಾರು ಪಾಲಿಕೆ ಸ್ವತ್ತುಗಳ ದಾಖಲೆಗಳನ್ನು ನಾಶಪಡಿಸಿರುವ ಆರೋಪಗಳಿಗೆ ಒಳಗಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಜಯರಾಂ ಅವರು, 11/04/2005ರಂದು ಪಾಲಿಕೆಯ ಆಯುಕ್ತರ ಗಮನಕ್ಕೂ ತರದೆ / ಅನುಮತಿಯನ್ನೂ ಪಡೆಯದೇ ಏಕಾಏಕಿ ಸ್ವಯಂ ನಿರ್ಧಾರದಿಂದ ಕಾನೂನು ಬಾಹಿರವಾಗಿ ಮಾರಾಟದ ಕ್ರಯ ಪತ್ರವನ್ನು ಮಾಡಿಕೊಟ್ಟಿದ್ದಾರೆ.

13/02/2006 ರಂದು ಬೇಬಿಯಮ್ಮ ನವರು ತಮ್ಮ ಮಗಳು ವಾಣಿ ಅವರಿಗೆ ¾¾ದಾನ ಪತ್ರ¿¿ ದ ಮೂಲಕ ಸದರಿ ಸ್ವತ್ತಿನ ಹಕ್ಕನ್ನು ವರ್ಗಾಯಿಸಿದ್ದರು. ವಾಣಿ ಅವರಿಂದ 22/05/2008 ರಂದು ಕೆ.ತಾಜ್ ಎಂಬುವವರ ಹೆಸರಿದೆ. ನಂತರ ಕೆ.ತಾಜ್ ಅವರಿಂದ 16/08/2019ರಂದು ಎಂ.ಅಕ್ರಮುಲ್ಲಾ ಎಂಬುವವರ ಹೆಸರಿಗೆ ಕ್ರಯಪತ್ರಗಳ ಮೂಲಕ ಸದರಿ ಸ್ವತ್ತನ್ನು ಮಾರಾಟ ಮಾಡಲಾಗಿದೆ.

ಬೇಬಿಯಮ್ಮ ಹೆಸರಿಗೆ ಮಾಡಿಕೊಟ್ಟರುವ ಕ್ರಯ ಪತ್ರದ ಷೆಡ್ಯೂಲ್‍ನಲ್ಲಿ ಸದರಿ ಸ್ವತ್ತಿನ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ 3 ಪ್ರತ್ಯೇಕ ಪಾಲಿಕೆ ಸ್ವತ್ತುಗಳು ಇವೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ.

7 ಕೋಟಿ ರೂ.ಗೂ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ 1750 ಚ. ಅಡಿ ವಿಸ್ತೀರ್ಣದ, ಕಬಳಿಸಲ್ಪಟ್ಟಿರುವ ಪಾಲಿಕೆ ಸ್ವತ್ತಿನಲ್ಲಿ ನಿಯಮಬಾಹಿರವಾಗಿ ತಳಮಹಡಿ ಸೇರಿದಂತೆ 7 ಅಂತಸ್ತುಗಳ ವಸತಿ ಸಂಕೀರ್ಣ ನಿರ್ಮಿಸಲಾಗುತ್ತಿದೆ ಎಂದು ದೂರಿದರು.

ಈ ಅಮೂಲ್ಯ ಪಾಲಿಕೆ ಸ್ವತ್ತುಗಳನ್ನು ಕೂಡಲೇ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಕಾನೂನು ರೀತ್ಯಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎನ್.ಆರ್.ರಮೇಶ್ ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಆಗ್ರಹಿಸಿದರು.

Facebook Comments