ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಕನ್ನಡ ಕಟ್ಟಾಳು ಜಿ.ನಾರಾಯಣ ಹೆಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಹಾಗೂ ಸಾಹಿತಿ ನಾಡೋಜ ಜಿ.ನಾರಾಯಣ ಅವರ ಹೆಸರನ್ನು ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಇಟ್ಟಿರುವ ಬಿಬಿಎಂಪಿ ಕ್ರಮವನ್ನು ಕರ್ನಾಟಕ ವಿಕಾಸರಂಗ ಸ್ವಾಗತಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ವ.ಚ.ಚನ್ನೇಗೌಡ, ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ನಾರಾಯಣ ಅವರು ಸದಾ ನಾಡು, ನುಡಿಗಾಗಿ ತುಡಿಯುವ ಮನಸ್ಸು, ಚಿಕ್ಕಂದಿನಿಂದಲೇ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕನ್ನಡ ಪರ ಸಂಘಟಕರಾಗಿ ಸಂಸ್ಕøತಿ ಚಿಂತಕರಾಗಿ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿ ಬೆಂಗಳೂರು ಮಹಾಪೌರರಾಗಿ ಸಲ್ಲಿಸಿದ ಸೇವೆ ಮೌಲ್ಯಯುತವಾದದ್ದು, ಬೆಂಗಳೂರಿಗೆ ಕುಡಿಯುವ ಕಾವೇರಿ ನೀರಿನ ಯೋಜನೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ದೇಶದ ರಾಜಧಾನಿ ದೆಹಲಿಯಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ಸಂಘಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ದೇಶ ಪ್ರೇಮಿ, ನಾಡ ಪ್ರೇಮಿಯವರ ಹೆಸರನ್ನು ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಇಡುತ್ತಿರುವ ಬಿಬಿಎಂಪಿ ಕ್ರಮವನ್ನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.

Facebook Comments