ಶೇ.50ರಷ್ಟು ವಿವಿಪ್ಯಾಟ್ ತಾಳೆ ಹಾಕುವಂತೆ ಚಂದ್ರಬಾಬು ನಾಯ್ಡು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 20- ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷಾ ಫಲಿತಾಂಶದಿಂದ ವಿಚಲಿತರಾದಂತೆ ಕಂಡುಬಂದಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲಗುದೇಶಂ ಪಾರ್ಟಿ ನಾಯಕ ಎನ್.ಚಂದ್ರಬಾಬು ನಾಯ್ಡು ಶೇ.50ರಷ್ಟು ವಿವಿ ಪ್ಯಾಟ್‍ಗಳ ತಾಳೆ ನೋಡಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ಶೇ.50ರಷ್ಟು ವಿವಿ ಪ್ಯಾಟ್‍ಗಳನ್ನು ತಾಳೆ ನೋಡಲೇಬೇಕು. ತಾಳೆ ಸರಿಯಿಲ್ಲದಿದ್ದರೆ ಎಲ್ಲಾ ವಿವಿ ಪ್ಯಾಟ್‍ಗಳನ್ನು ಕೂಲಕಂಷ ಪರೀಕ್ಷೆಗೆ ಒಳಪಡಿಸಲೇಬೇಕೆಂದು ಆಗ್ರಹಿಸಿದ್ದಾರೆ.

ನಾವು ಮೊದಲಿನಿಂದಲೂ ಶೇ.50ರಷ್ಟು ವಿವಿ ಪ್ಯಾಟ್ ತಾಳೆಗೆ ಆಗ್ರಹಿಸುತ್ತಲೇ ಬಂದಿದ್ದೇವೆ. ಚುನಾವಣಾ ಆಯೋಗ ಇದಕ್ಕೆ ಆಸ್ಪದ ನೀಡಿಲ್ಲ. ಮೇ 23ರ ಫಲಿತಾಂಶದ ನಂತರ ನಮಗೆ ಇದರ ಬಗ್ಗೆ ಅನುಮಾನ ಇದ್ದಲ್ಲಿ ನಾವು ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಮಾಡುತ್ತೇವೆ.

ಶೇ.50ರಷ್ಟು ವಿವಿ ಪ್ಯಾಟ್ ತಾಳೆಗೆ ಒತ್ತಾಯಿಸುತ್ತೇವೆ. ಇದಕ್ಕೆ ಆಸ್ಪದ ನೀಡದಿದ್ದರೆ ವಿರೋಧ ಪಕ್ಷಗಳ ನಾಯಕರೊಂದಿಗೆ ಆಯೋಗದ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ನಾಯ್ಡು ಎಚ್ಚರಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ