ಭಾರೀ ಭ್ರಷ್ಟಾಚಾರ ಪ್ರಕಾರದಲ್ಲಿ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ದೋಷಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೌಲಾಲಂಪೂರ್, ಜು.28- ಬಹು ಕೋಟಿ ಡಾಲರ್ ಭ್ರಷ್ಟಾಚಾರ ಪ್ರಕರಣದ ಸಂಬಂಧ ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ಅವರನ್ನು ನ್ಯಾಯಾಲಯವೊಂದು ದೋಷಿಯನ್ನಾಗಿ ಘೋಷಿಸಿದೆ.

1ಎಂಬಿಡಿ ಬಂಡವಾಳ ಹೂಡಿಕೆ ನಿಧಿಯಲ್ಲಿ ಕೋಟ್ಯಂತರ ಡಾಲರ್ ಭ್ರಷ್ಟಾಚಾರ ಪ್ರಕರಣದ ಸಂಬಂಧ ಮಲೇಷ್ಯಾದ ನ್ಯಾಯಾಲಯವು ಮಾಜಿ ಪ್ರಧಾನಿ ರಜಾಕ್‍ರನ್ನು ತಪ್ಪಿತಸ್ಥರೆಂದು ಘೋಷಿಸಿದ್ದು, ಎಲ್ಲ ಏಳು ಆರೋಪಗಳ ಸಂಬಂಧ ಅವರನ್ನು ಶಿಕ್ಷೆಗೆ ಗುರಿಪಡಿಸಲಿದೆ.

ಈ ಪ್ರಕರಣದ ಬಗ್ಗೆ ತಮ್ಮ ತೀರ್ಪಿನ ಪ್ರತಿಯನ್ನು ಎರಡು ಗಂಟೆಗಳ ಕಾಲ ಓದಿದ ನಂತರ ನ್ಯಾಯಮೂರ್ತಿ ಮಹಮದ್ ನಜಲಾನ್ ಘಜಲಿ ಅವರು ಆರೋಪಿ (ನಜೀಬ್ ರಜಾಕ್) ದೋಷಿ ಎಂಬುದು ನನಗೆ ಕಂಡುಬಂದಿದೆ ಹಾಗೂ ಏಳು ಆರೋಪಿಗಳ ಸಂಬಂಧ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಘೋಘಿಷಿದರು.

ನಜೀಬ್ ರಜಾಕ್ ನೇತೃತ್ವದ ಮಲೈ ಪಕ್ಷವು ಬಹುದೊಡ್ಡ ಪಾಲು ಪಡೆದು ಮೈತ್ರಿಕೂಟದೊಂದಿಗೆ ಸರ್ಕಾರಕ್ಕೆ ಬಂದ ಐದು ತಿಂಗಳ ನಂತರ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

1ಎಂಬಿಡಿ ಹಗರಣದಿಂದಾಗಿ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ರಜÁಕ್ ಅವರ ಪಕ್ಷ ಪರಾಭವಗೊಂಡಿತ್ತು.

Facebook Comments

Sri Raghav

Admin