ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ಶಾಸಕರಿಗೆ ನ್ಯಾಯ ನೀಡುತ್ತೇವೆ : ಕಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಡಿ.8- ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಬಂದ ಶಾಸಕರಿಗೆ ಅನ್ಯಾಯವಾಗದಂತೆ ಸ್ಥಾನಮಾನವನ್ನು ಕಲ್ಪಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದ ಉಪಚುನಾವಣೆಯಲ್ಲಿ 15 ಕ್ಕೂ 15 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಬಿಜೆಪಿ ಯಾವುದೇ ಆಪರೇಷನ್ ಕಮಲ, ಆಕರ್ಷಣೆ ಮಾಡುವ ಪಕ್ಷವಲ್ಲ. ಬದಲಾಗಿ ಕಾಂಗ್ರೆಸ್ ದಲ್ಲಿ ಅತೃಪ್ತಿಯಿಂದ ಬೇಸರದಿಂದ ಹೊರಬಂದ ಶಾಸಕರನ್ನು ಬಿಜೆಪಿ ಸ್ವಾಗತಿಸುತ್ತದೆ.

ಅಲ್ಲದೇ ಅನರ್ಹ ಶಾಸಕರು ರಾಜೀನಾಮೆ ನೀಡಿದ ಕಾರಣದಿಂದ ಮಾತ್ರ ಬಿಜೆಪಿ ಸರ್ಕಾರ ಬಂದಿದೆ ವಿನಹ ಅನರ್ಹರು ಬಿಜೆಪಿಗೆ ಸೇರಿದಕ್ಕೆ ಅಲ್ಲಾ ಎಂದರು. ಇನ್ನೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿ. ಅವರು ಶಾಸಕರಿಗೆ ಬೇಸರ ಮಾಡಿದ್ದಕ್ಕೆ ಬಿಜೆಪಿಗೆ ಬಂದಿದ್ದಾರೆ ಗುಂಡೂರಾವ್ ಸಂಘಟಿಸುವ ಕೆಲಸ ಮಾಡಲಿ ಎಂದರು.

Facebook Comments

Sri Raghav

Admin