ಲಡಾಕ್ ಫೈಟ್ : ರಾಷ್ಟ್ರೀಯ ಯುದ್ದ ಸ್ಮಾರಕದಲ್ಲಿ ಹುತಾತ್ಮ ಯೋಧರ ಹೆಸರು ಕೆತ್ತನೆ
ನವದೆಹಲಿ. ಜು.31- ಪೂರ್ವ ಲಡಾಕ್ ನಲಿ ಭಾರತ ಮತ್ತು ಚೀನಾದ ನಡುವೆ ನಡೆದ ದಾಳಿಯಲ್ಲಿ ಮೃತಪಟ್ಟ 20 ಭಾರತೀಯ ಯೋಧರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗುವುದು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಸೈನ್ಯವನ್ನು ದಿಟ್ಟತನದಿಂದ ಎದುರಿಸಿ ಹುತಾತ್ಮರಾದ 20 ಭಾರತೀಯ ಸೇನಾ ಸಿಬ್ಬಂದಿಯ ಹೆಸರಗಳನ್ನು ಕೆತ್ತಲು ಇನ್ನು ಕೆಲವು ತಿಂಗಳು ಬೇಕಾಗಬಹುದು. ಆದಷ್ಟು ಶೀಘ್ರ ವಾಗಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಜೂನ್ 15 ರ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ
ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರತೀಯ ಸೇನಾ ಸಿಬ್ಬಂದಿಯಲ್ಲಿ 16 ಬಿಹಾರ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ. ಸಂತೋಷ್ ಬಾಬು ಕೂಡ ಸೇರಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಗಸ್ತು ತಿರುಗುವ ಸ್ಥಳ 14 ರ ಆಸುಪಾಸಿನಲ್ಲಿ ಚೀನಾ ಕಣ್ಗಾವಲು ಪೋಸ್ಟ್ ನಿರ್ಮಿಸುವುದನ್ನು ವಿರೋಧಿಸಿದ ನಂತರ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿತ್ತು.
ಘರ್ಷಣೆಯಲ್ಲಿ ಮೃತಪಟ್ಟಿರುವ ಸೈನಿಕರ ಬಗ್ಗೆ ಚೀನಾ ಬಹಿರಂಗಪಡಿಸಿಲ್ಲ ವಾದರೂ ಸಾವನ್ನಪ್ಪಿದವರ ಸಂಖ್ಯೆ 35 ಆಗಿತ್ತು ಎಂದು ಅಮೆರಿಕದ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.