ಹೊಸ ವರ್ಷದಿಂದ ಮಧ್ಯರಾತ್ರಿ 12ರ ವರೆಗೂ ಮೆಟ್ರೋ ಸಂಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.11- ಮುಂದಿನ ಜನವರಿಯಿಂದ ನಮ್ಮ ಮೆಟ್ರೋ ರೈಲಿನ ಸಮಯ ಇನ್ನಷ್ಟು ವಿಸ್ತರಣೆಗೊಳ್ಳಲಿದೆ. ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಬಿಎಂಆರ್‍ಎಲ್ ಮೆಟ್ರೋ ರೈಲಿನ ಸಮಯವನ್ನು ಜನವರಿ 1ರಿಂದ ವಿಸ್ತರಿಸಲು ನಿರ್ಧರಿಸಲಾಗಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಕೊನೆಯ ಟ್ರೇನ್ ಮಧ್ಯರಾತ್ರಿ 12 ಗಂಟೆಗೆ ಬಿಡಲಿದೆ. ಮೈಸೂರು ರೋಡ್ ಸ್ಟೇಷನ್, ಬಯ್ಯಪ್ಪನಹಳ್ಳಿ, ನಾಗಸಂದ್ರ, ಯಲಚೇನಹಳ್ಳಿ ಸ್ಟೇಷನ್‍ಗಳ ಮೆಟ್ರೋ ರೈಲಿನ ಸಮಯ ತಡರಾತ್ರಿವರೆಗೆ ವಿಸ್ತರಣೆಯಾಗಲಿದೆ.

ಮೈಸೂರು ರೋಡ್ ಸ್ಟೇಷನ್‍ನಿಂದ ರೈಲು ರಾತ್ರಿ ಹೊರಡುವ ಸಮಯ 11.05 ಇದ್ದುದನ್ನು ರಾತ್ರಿ 11.40ಕ್ಕೆ ವಿಸ್ತರಿಸಲಾಗುವುದು. ಬಯ್ಯಪ್ಪನಹಳ್ಳಿ ಸ್ಟೇಷನ್‍ನಿಂದ ರಾತ್ರಿ 11 ಗಂಟೆಗೆ ಹೊರಡುವ ಟ್ರೇನ್ ಸಮಯವನ್ನು 11.35ಕ್ಕೆ ವಿಸ್ತರಿಸಲಾಗುತ್ತದೆ. ನಾಗಸಂದ್ರ ನಿಲ್ದಾಣದಿಂದ ಕೊನೆಯ ಮೆಟ್ರೋ ರೈಲು 10.50ಕ್ಕೆ ಹೊರಡುತ್ತಿದ್ದುದನ್ನು 11.25ಕ್ಕೆ ವಿಸ್ತರಿಸಲಾಗುತ್ತದೆ.

ಅದೇ ರೀತಿ ಯಲಚೇನಹಳ್ಳಿ ನಿಲ್ದಾಣದಿಂದ ಕೊನೆಯ ಟ್ರೇನ್ ಇನ್ನು ಮುಂದೆ 11.35ಕ್ಕೆ ಹೊರಡಲಿದೆ. ಇದು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments