ಬಹುದಿನದ ಕನಸು ನನಸು : ಬೈಯಪ್ಪನಹಳ್ಳಿ-ನಾಯಂಡನಹಳ್ಳಿ 6 ಬೋಗಿಗಳ ಮೆಟ್ರೋ ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Metro--01

ಬೆಂಗಳೂರು,ಜೂ.22- ಬೆಂಗಳೂರಿಗರ ನಗರದ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದೆ. ಬೈಯಪ್ಪನಹಳ್ಳಿಯಿಂದ ನಾಯಂಡನಹಳ್ಳಿವರೆಗೂ 6 ಬೋಗಿಗಳ ಮೆಟ್ರೋ ರೈಲು ಸಂಚಾರ ಇಂದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಡಗೂಡಿ ಆರು ಬೋಗಿಗಳ ನಮ್ಮ ಮೆಟ್ರೋ ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಿದರು. ವಿಧಾನಸೌಧದಿಂದ ಮೆಟ್ರೋದಲ್ಲಿಯೇ ಸಂಚರಿಸಿ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿಗಳು ಅಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು ವಿಶೇಷವಾಗಿತ್ತು. ನಂತರ ತಾವೇ ಟಿಕೆಟ್ ಖರೀದಿಸಿ ಜನಸಾಮಾನ್ಯರೊಂದಿಗೆ ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್ ವರೆಗೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಚಿವರಾದ ಕೆ ಜೆ ಜಾರ್ಜ್, ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹಾಗೂ ಮೆಟ್ರೋ ಅಧಿಕಾರಿಗಳು ಇದ್ದರು.

ಸದ್ಯ ಮೆಟ್ರೊ ಬಳಿಯಿರುವ 50 ರೈಲುಗಳ ಪೈಕಿ ಒಂದು ರೈಲಿಗೆ ಬೆಮೆಲ್ ಸಂಸ್ಥೆ ನೀಡಿದ ಮೂರು ಬೋಗಿಗಳನ್ನು ಸೇರಿಸಿ 6 ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. ಮೆಟ್ರೊ ಬಳಿಯಿರುವ 50 ರೈಲುಗಳ ಪೈಕಿ ಒಂದು ರೈಲಿಗೆ ಬೆಮೆಲ್ ಸಂಸ್ಥೆ ನೀಡಿದ 3 ಬೋಗಿಗಳನ್ನು ಸೇರಿಸಿ 6 ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. 3 ಬೋಗಿಗಳ ರೈಲಿನಲ್ಲಿ 900 ಜನ ಸಂಚರಿಸುತ್ತಿದ್ದು, ಈಗ 6 ಬೋಗಿಗಳಾಗಿರುವುದರಿಂದ 1800 ಜನ ಸಂಚರಿಸಬಹುದಾಗಿದೆ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.

ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೊಸ ರೈಲು ಓಡಾಡಲಿದೆ. 6 ಬೋಗಿಗಳಲ್ಲಿ ಮೊದಲನೇ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದ್ದು, ಮೆಟ್ರೊ ರೈಲು ಪ್ರಯಾಣಿಕರ ಪೈಕಿ ಶೇ. 40ರಷ್ಟು ಮಹಿಳೆಯರು ಇರುವುದನ್ನು ಸಮೀಕ್ಷೆಯಿಂದ ಖಚಿತಪಡಿಸಿಕೊಂಡಿರುವ ನಿಗಮ, ಈ ಕಾರಣಕ್ಕೆ ಆರು ಬೋಗಿಯ ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಟ್ಟಿದೆ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‍ನಿಂದ (ಬಿಇಎಂಎಲ್) ಖರೀದಿಸಿದ ಮೂರು ಹೊಸ ಬೋಗಿಗಳನ್ನು, ಈಗಾಗಲೇ ಕಾರ್ಯಾ ಆರಂಭಿಸಿರುವ ಮೂರು ಬೋಗಿಗಳ ರೈಲಿಗೆ ಜೋಡಿಸಲಾಗಿದೆ. ಪ್ರತಿದಿನ ಪೀಕ್ ಸಮಯದಲ್ಲಿ 12 ಟ್ರಿಪ್ ಗಳಲ್ಲಿ ಈ 6 ಬೋಗಿಗಳ ರೈಲನ್ನು ಬಳಸಿಕೊಳ್ಳಲು ಮೆಟ್ರೊ ನಿಗಮ ನಿರ್ಧರಿಸಿದೆ.

ಪ್ರತಿದಿನ ಜನ ದಟ್ಟಣೆ ಸಂದರ್ಭದಲ್ಲಿ 12 ಟ್ರಿಪ್‍ಗಳಲ್ಲಿ ಈ 6 ಬೋಗಿಗಳ ರೈಲನ್ನು ಬಳಸಿಕೊಳ್ಳಲು ಮೆಟ್ರೊ ನಿಗಮ ನಿರ್ಧರಿಸಿದೆ. ರೈಲ್ವೇ ಸುರಕ್ಷತಾ ಆಯುಕ್ತರು 6 ಬೋಗಿಗಳ ರೈಲು ಗರಿಷ್ಠ 80 ಕಿಲೋ ಮೀಟರ್ ಸ್ಪೀಡ್‍ನಲ್ಲಿ ಸಂಚರಿಸಲು ಅನುಮತಿ ನೀಡಿದ್ದಾರೆ. ಬೈಯ್ಯಪ್ಪನಹಳ್ಳಿ – ನಾಯಂಡಹಳ್ಳಿ ಮಧ್ಯೆ ಸದ್ಯ 24 ರೈಲುಗಳು ಸಂಚರಿಸುತ್ತಿದ್ದು, 50 ರಿಂದ 60 ಲಕ್ಷ ಆದಾಯ ಬರ್ತಿದೆ. 6 ಬೋಗಿಗಳ ರೈಲನ್ನು ಹೆಚ್ಚಿನ ರಷ್ ಇದ್ದಾಗ ಬಳಸಿಕೊಳ್ಳಲು ನಿಗಮ ಪ್ಲಾನ್ ಮಾಡಿದೆ. ಜೂನ್ 17ಕ್ಕೆ ಮೆಟ್ರೊ ಮೊದಲ ಹಂತ ಲೋಕಾರ್ಪಣೆಯಾಗಿ ಒಂದು ವರ್ಷವಾಗಿತ್ತು. 12 ಕೋಟಿ ಗೂ ಹೆಚ್ಚು ಮಂದಿ ಈ ಅವಧಿಯಲ್ಲಿ ಮೆಟ್ರೊ ರೈಲಿನಲ್ಲಿ ಸಂಚರಿಸಿದ್ದರು. 2019ರ ಜೂನ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮೆಟ್ರೊ ರೈಲುಗಳೆಲ್ಲಾ 6 ಬೋಗಿಗಳಾದ್ರೆ ಪ್ರಯಾಣಿಕರ ಹೊತ್ತೊಯ್ಯುವ ಸಾಮರ್ಥ್ಯ ಹೆಚ್ಚಾಗಲಿದೆ. ಆಗಸ್ಟ್ ನಲ್ಲಿ ಮತ್ತೊಂದು ಸೆಟ್ ಕೋಚ್ ಬೆಮೆಲ್‍ನಿಂದ ಮೆಟ್ರೊ ನಿಗಮಕ್ಕೆ ಹಸ್ತಾಂತರವಾಗಲಿದೆ.

Facebook Comments

Sri Raghav

Admin