ನಂದಿಬೆಟ್ಟದಲ್ಲಿ ಮುಂದುವರಿದ ಲಾಕ್‌ಡೌನ್, ನಿರಾಸೆಯಿಂದ ವಾಪಸ್ಸಾಗ್ತಿರೋ ಪ್ರವಾಸಿಗರು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಆ.9- ತುಂತುರು ಮಳೆ, ಮೋಡ ಕವಿದ ವಾತಾವರಣ ನಡುವೆ ವೀಕೆಂಡ್‍ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ನಂದಿ ಗಿರಿಧಾಮಕ್ಕೆ ತೆರಳಿದ್ದ ಪ್ರವಾಸಿಗರಿಗೆ ಇಂದೂ ಕೂಡ ನಿರಾಸೆಯಾಗಿದೆ.

ಲಾಕ್‍ಡೌನ್ ಸಡಿಲಿಕೆ ಆಗಿದೆ . ಇನ್ನು ಆರಾಮಾಗಿ ನಂದಿ ಗಿರಿಧಾಮಕ್ಕೆ ಭೇಟಿ ಕೊಡಬಹುದು ಎಂದು ಪ್ರವಾಸಿಗರ ದಂಡೇ ಬಂದಿತ್ತು. ಆದರೆ ಪೊಲೀಸರು ಅವರ ಮನವೊಲಿಕೆ ಮಾಡಿ ಅವರನ್ನು ವಾಪಸ್ ಕಳುಹಿಸಿದ ದೃಶ್ಯಗಳು ಕಂಡು ಬಂತು.

ವೀಕೆಂಡ್‍ನಿಂದ ಈ ಚುಮು ಚುಮು ಚಳಿಯಲ್ಲಿ ಗಿರಿಧಾಮದ ಸೊಬಗನ್ನು ಸವಿಯಲು ಬೆಂಗಳೂರಿನಿಂದ ಬರುತ್ತಿದ್ದ ವಾಹನಗಳನ್ನು ಕಂಡು ಸ್ಥಳೀಯರು ಕೂಡ ಆಶ್ಚರ್ಯ ಚಕಿತರಾಗಿದ್ದರು.

ಬೆಟ್ಟದ ತಪ್ಪಲಿನ ಚೆಕ್‍ ಪೋಸ್ಟ್ ನಲ್ಲೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚೆಕ್‍ ಪೋಸ್ಟ್ ಬಳಿ ಬ್ಯಾರಿಕೇಡ್ ಹಾಕಿ ವಾಹನಗಳ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ.

ಭಾನುವಾರವಾದ ಕಾರಣ ಇಂದು ಎಂದಿನಂತೆ ನಂದಿಗಿರಿಧಾಮದತ್ತ ಪ್ರವಾಸಿಗರು ಆಗಮಿಸಿದ್ದು, ಆದರೆ ಪ್ರವೇಶ ಭಾಗ್ಯ ಇಲ್ಲದೆ ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ.

Facebook Comments

Sri Raghav

Admin