ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಕಿಡಿಗೇಡಿ ಇವನೇ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಜೂ 11- ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾಶರೆ. ಗೊಳಸಂಗಿ ಗ್ರಾಮದ ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ (32) ಬಂಧಿತ ಆರೋಪಿ.

ಕಳೆದ ಮೂರು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ಜಾಡು ಹಿಡಿದ ಪೊಲೀಸರಿಗೆ ವಿಚಿತ್ರ ಮಾಹಿತಿ ಬೆಳಕಿಗೆ ಬಂದಿದೆ.

ಈತ ನಂದಿ ದೇವರನ್ನು ಹೆಚ್ಚು ನಂಬಿದ್ದ. ಹೀಗಾಗಿ ಮಾಡಿಕೊಂಡಿದ್ದ 3 ಲಕ್ಷ ರೂ. ಸಾಲ ತೀರಲಿ ಹಾಗೂ ಪತ್ನಿಯ ಜೊತೆಗೆ ಹದಗೆಟ್ಟಿದ್ದ ಸಂಬಂಧ ಸರಿ ಹೋಗಲಿ ಎಂದು ದೇವರ ಮೊರೆ ಹೋಗಿದ್ದ.

ಆದರೆ, ಚಂದ್ರಾಮಪ್ಪ ದೊಡ್ಡಮನಿ ಸಮಸ್ಯೆ ಬಗೆಹರಿದಿರಲಿಲ್ಲ. ಇದರಿಂದ ಸಿಟ್ಟಿಗೆದ್ದು, ನಂದಿ ಬಸವೇಶ್ವರ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದ. ಘಟನೆ ನಂತರ ತಲೆ ಮರೆಸಿಕೊಂಡಿದ್ದ. ಘಟನೆ ನಡೆದು ಮೂರು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ಬಸಪ್ಪ .3 ಲಕ್ಷ ಸಾಲ ಮಾಡಿಕೊಂಡಿದ್ದು ಸಂಸಾರದ ತಾಪತ್ರಯವೂ ಬಹಳಷ್ಟಿದೆ. ಇದರಿಂದ ನೊಂದುಕೊಂಡಿದ್ದ ಆತ ತನ್ನೆಲ್ಲ ಸಂಕಷ್ಟಗಳನ್ನು ನಿವಾರಣೆ ಮಾಡುವಂತೆ ನಿತ್ಯ ಬಸವೇಶ್ವರ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋಗುತ್ತಿದ್ದ. ಆದರೆ, ದೇವರು ತನ್ನ ಕೋರಿಕೆಯನ್ನು ಇದುವರೆಗೂ ಈಡೇರಿಸಲಿಲ್ಲ ಎಂದು ಹೇಳಿ ಶನಿವಾರ ಬೆಳಗ್ಗೆ ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments