ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಮನೆಗಳ್ಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ.29-ಮನೆಯವರು ಊರಿಗೆ ತೆರಳಿದ್ದ ಸಮಯದಲ್ಲಿ ಪಿಕಾಸಿಯಿಂದ ಮನೆ ಬಾಗಿಲು ಮುರಿದು 194 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ನಂದಿನಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಮನೆಗಳ್ಳನನ್ನು ಲಕ್ಷ್ಮೀದೇವಿನಗರದ ನಿವಾಸಿ ದಿಲೀಪ್ ಅಲಿಯಾಸ್ ಕುಟ್ಟಿ ಎಂದು ಗುರುತಿಸಲಾಗಿದೆ.ಸಿಗರೇಟ್ ಸೇದುವ ಚಟ ಇರುವ ಆರೋಪಿ ಲಗ್ಗೆರೆಯಲ್ಲಿರುವ ಬಸವೇಶ್ವರ ಪ್ರಾವಿಜನ್ ಸ್ಟೋರ್‍ನಲ್ಲಿ ಸಿಗರೇಟ್ ಖರೀದಿಸಲು ಹೋಗಿದ್ದಾಗ ಅಂಗಡಿ ಮಾಲಿಕ ಕುಮಾರ್, ನಾನು ಎರಡು ದಿನಗಳ ಕಾಲ ಊರಿಗೆ ಹೋಗುತ್ತೇನೆ. ಹೆಚ್ಚು ಸಿಗರೇಟ್‍ಗಳನ್ನು ತೆಗೆದುಕೊಳ್ಳುವಂತೆ ತಿಳಿಸಿರುತ್ತಾನೆ.

ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡಿದ್ದ ಕುಟ್ಟಿ ಪ್ರೀತಿನಗರದಲ್ಲಿರುವ ಕುಮಾರ್ ಅವರ ಮನೆಗೆ ತೆರಳಿ ಪಿಕಾಸಿಯಿಂದ ಮನೆ ಬಾಗಿಲು ಮುರಿದು 8.5 ಲಕ್ಷ ಮೌಲ್ಯದ ಚಿನ್ನಭರಣ ದೋಚಿ ಪರಾರಿಯಾಗಿದ್ದ.

ಈ ಕುರಿತಂತೆ ಕುಮಾರ್ ಹಾಗೂ ಆತನ ಪತ್ನಿ ಭಾರತಿ ನೀಡಿದ ದೂರು ದಾಖಲಿಸಿಕೊಂಡ ನಂದಿನ ಬಡಾವಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments

Sri Raghav

Admin