ನಂದಿನಿ ಲೇಔಟ್‍ನಲ್ಲಿ ಕೇಂದ್ರ ಪಡೆಗಳ ಪಥ ಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.26- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಂದಿನಿ ಲೇಔಟ್‍ನಲ್ಲಿಂದು ಪಥ ಸಂಚಲನ ನಡೆಯಿತು.ಸ್ಥಳೀಯ ಪೂಲೀಸರ ಜತೆಗೆ ಸಿಐಎಸ್‍ಎಫ್, ಕೆಎಸ್‍ಆರ್‍ಪಿ ಮತ್ತು ಸಿಎಆರ್ ಅಕಾರಿ ಮತ್ತು ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ನಂದಿನಿ ಲೇಔಟ್ ಪೂಲೀಸ್ ಠಾಣೆ ವ್ಯಾಪ್ತಿಗೆ ಬರುವ ಲಕ್ಷ್ಮಿದೇವಿನಗರ ಬಸ್ ನಿಲ್ದಾಣ, ಕೂಲಿ ನಗರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಪಥ ಸಂಚಲನ ನಡೆಯಿತು.

ಉತ್ತರ ವಿಭಾಗದ ಎಂಟು ಪೂಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮತದಾನ ನಡೆಯಲಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಉತ್ತರ ವಿಭಾಗದ ಪೂಲೀಸ್ ಅಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ನಿನ್ನೆ ಸಿಐಎಸ್‍ಎಫ್‍ನ ಒಂದು ಕಂಪೆನಿ ಉತ್ತರ ವಿಭಾಗಕ್ಕೆ ಬಂದಿದೆ. ಇನ್ನೂ ಒಂದು ಕಂಪೆನಿ ಇಂದು ಅಥವಾ ನಾಳೆ ಬರಲಿದೆ.

ಈ ವಿಭಾಗಕ್ಕೆ ಸ್ಥಳೀಯ ಪೂಲೀಸರ ಜತೆಗೆ ಹೆಚ್ಚುವರಿಯಾಗಿ 10 ಪೂಲೀಸ್ ಇನ್ಸ್‍ಪೆಕ್ಟರ್‍ಗಳು, 36 ಸಬ್‍ಇನ್ಸ್‍ಪೆಕ್ಟರ್‍ಗಳು, 200 ಮಂದಿ ಕಾನ್ಸ್‍ಟೆಬಲ್ ಮತ್ತು ಹೆಡ್‍ಕಾನ್ಸ್‍ಟೆಬಲ್‍ಗಳು, 4 ಕೆಎಸ್‍ಆರ್‍ಪಿ ಮತ್ತು 3 ಸಿಎಆರ್ ತುಕಡಿಗಳನ್ನು ಬಂದೋಬಸ್ತ್‍ಗಾಗಿ ನೀಡಲಾಗಿದೆ.

Facebook Comments

Sri Raghav

Admin