ನಂಜನಗೂಡು ಆರೋಗ್ಯಾಧಿಕಾರಿ ಸಾವು : ಮುಷ್ಕರಕ್ಕೆ ಮುಂದಾದ ವೈದ್ಯರು..!

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು.ಆ. 21.ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಲ್ಲ ವೈದ್ಯರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ .

ಮೈಸೂರಿನ ಜಿಲ್ಲಾ ಪಂಚಾಯಿತಿ ಸಿಇಒ ಮಿಶ್ರಾ ಅವರನ್ನು ಅಮಾನತುಗೊಳಿಸಿ ಅವರ ವಿರುದ್ಧ ತನಿಖೆ ನಡೆಸಬೇಕು ಮತ್ತು ಆರೋಗ್ಯಾಧಿಕಾರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ .

ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ವೈದ್ಯರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಅವರು ಮಾಧ್ಯಮದೊಂದಿಗೆ ಮಾತನಾಡಿ ಇದು ಒಬ್ಬ ನಿಷ್ಠಾವಂತ ವೈದ್ಯರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಮಾರ್ಚ್ ಹದಿನೈದು ರಿಂದ ನಿರಂತರವಾಗಿ ಅವರು ಸೇವೆ ಸಲ್ಲಿಸುತ್ತಿದ್ದರೂ ಹೆಂಡತಿ ಮಕ್ಕಳನ್ನು ನೋಡಲು ಹೋಗಿರಲಿಲ್ಲ ಪ್ರತ್ಯೇಕ ಮನೆ ಮಾಡಿ ಇಲ್ಲೇ ವಾಸ ಮಾಡುತ್ತಾ ಜನರಿಗೆ ಸ್ಪಂದಿಸುತ್ತಿದ್ದರು ಆದರೆ ಇದರ ಬಗ್ಗೆ ಅರಿವು ಇಲ್ಲದಂತಹ ಸಿಇಒ ಅವರ ಮೇಲೆ ಒತ್ತಡ ಹಾಕಿ ಅವರಿಗೆ ಕಿರುಕುಳ ನೀಡಿದ್ದಾರೆ.

ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ತಪ್ಪಿತಸ್ಥ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ವೈದ್ಯರ ಮುಷ್ಕರ ಸರಿಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿಡಿಮಿಡಿಗೊಂಡ ರವೀಂದ್ರ ಅವರು ಹೀಗೆ ನಿಷ್ಠಾವಂತ ವೈದ್ಯರನ್ನು ಕಳೆದುಕೊಂಡಿದ್ದೀರಿ ಈ ಇಂಥವರು ಮತ್ತೆ ಹುಟ್ಟಿ ಬರುತ್ತಾರಾ..? ಎಂದು ಮರು ಪ್ರಶ್ನೆ ಹಾಕಿದ್ದಾರೆ.

# ಕ್ಯಾಂಡಲ್‌ಲೈಟ್ ಪ್ರತಿಭಟನೆ :
ವೈದ್ಯಕೀಯ ಬ್ರಾತೃತ್ವದ  ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ಡಾ. ನಾಗೇಂದ್ರ, ನಂಜನಗೂಡು ಅವರ ಅಗಲಿದ ಆತ್ಮಕ್ಕಾಗಿ ಪ್ರಾರ್ಥಿಸಿ. ಸಮಾಜದ ಯೋಗಕ್ಷೇಮಕ್ಕಾಗಿ  ಹಾಗೂ ಕೊರೋನಾ ಹೆಮ್ಮಾರಿ ಗೆ ತ್ತಾಗಿ   ಪ್ರಾಣ ತ್ಯಾಗ ಮಾಡಿದ ಹೆಲ್ತ್‌ಕೇರ್ ಸಿಬ್ಬಂದಿ ಮತ್ತು ಕೋವಿಡ್ ಯೋಧರ  ಸ್ಮರಣಾರ್ಥ  ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ )- ಎಸ್‌ಬಿ ನೀಡಿದ ಕರೆಗೆ ಬೆಂಬಲವಾಗಿ  ಎಲ್ಲಾ ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್  ಸಂಘ) ಧ  ಸದಸ್ಯರು, ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಆಗಸ್ಟ್ 21 ಮತ್ತು 22 ರಂದು ನಾವೆಲ್ಲರೂ ಕಪ್ಪು ಬ್ಯಾಡ್ಜ್ / ರಿಬ್ಬನ್  ಆಗಸ್ಟ್ 23 ರ ಭಾನುವಾರ ರಾತ್ರಿ 8.00 ಕ್ಕೆ, ಕ್ಯಾಂಡಲ್‌ಲೈಟ್ ಪ್ರತಿಭಟನೆಯನ್ನು ಮಾಡುತ್ತಿದೆ.

ಆರೋಗ್ಯ ಸಿಬ್ಬಂದಿಯ ಸಮಸ್ಯೆಗಳು ಮತ್ತು ಒತ್ತಡಗಳಿಗೆ  ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮತ್ತು ಅಧಿಕಾರಶಾಹಿ ಆಡಳಿತವನ್ನು ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್  ಸಂಘ ಬಲವಾಗಿ ಖಂಡಿಸುತ್ತದೆ

Facebook Comments

Sri Raghav

Admin