ಗೆಲವಿನ ಗುಟ್ಟು ಬಿಚ್ಚಿಟ್ಟ ನೋಮಿ ಯುಎಸ್ ಓಪನ್‍ ಮಹಿಳಾ ಚಾಂಪಿಯನ್ ಸೋಕಾ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.16- ರಾಜಕೀಯ ದೂರವಿಟ್ಟು ಕ್ರೀಡೆಯ ಬಗ್ಗೆ ಆಸಕ್ತಿ ವಹಿಸಿ ಎಂದು ಜನರು ನನಗೆ ಹೇಳಿದ್ದರು. ಅದನ್ನು ನಾನು ಮಾಡಿದೆ. ಅದರಿಂದ ನಾನು ಗೆದ್ದೆ ಎಂದು ಅಮೆರಿಕ ಓಪನ್‍ನ ಮಹಿಳಾ ಚಾಂಪಿಯನ್ ನೋಮಿ ಸೋಕಾ ಹೇಳಿದ್ದಾರೆ.

22 ವರ್ಷದ ಯುವತಿ ಏನು ಸಾಧಿಸುತ್ತಾಳೆ ಎಂಬುದರ ಬಗ್ಗೆ ಎಲ್ಲರೂ ಯೋಚಿಸುತ್ತಿದ್ದರು. ಕ್ರೀಡೆಯ ಬಗ್ಗೆ ಅಪಾರವಾದ ಆಸಕ್ತಿ ಇದ್ದರೂ ಕೂಡ ಅದರಲ್ಲಿ ರಾಜಕೀಯ ಬೆರೆಸುವುದು ಆಗಾಗ ನಡೆಯುತ್ತದೆ ಎಂದು ಎಚ್ಚರಿಸಿದ್ದರು. ಇದನ್ನು ನಾನು ಯಾವಾಗಲೂ ನೆನಪಿನಲ್ಲಿಟ್ಟಿಕೊಳ್ಳುತ್ತಿದ್ದೆ ಎಂದಿದ್ದಾರೆ.

ಕ್ರೀಡೆಯಲ್ಲೂ ಕೂಡ ನಮ್ಮ ಸೌಂದರ್ಯ ಹಾಗೂ ಬಳಸುವ ವಸ್ತುಗಳ ಬಗ್ಗೆ ಸದಾ ಹೇಳಿಕೆಗಳು ಕೇಳಿ ಬರುತ್ತವೆ. ಸಾಮಾನ್ಯ ಮನುಷ್ಯರಾಗಿ ಸಾಧಿಸುವ ಅವಕಾಶಗಳು ಸಿಕ್ಕಾಗ ಅದನ್ನು ಕೈ ಬಾಚಿ ಸ್ವೀಕರಿಸಬೇಕು. ಆಗ ಮಾತ್ರ ನಮಗೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಎಚ್ಚರಿಕೆ ಇರಲಿ, ನಿನ್ನನ್ನು ನೋಡುವವರು ಆದರ್ಶ ಗುಣಗಳ ಜತೆಗೆ ನಿನ್ನ ವರ್ಚಸ್ಸಿನ ಬಗ್ಗೆ ಗಮನಿಸಿರುತ್ತಾರೆ. ಇದರ ಬಗ್ಗೆ ಸದಾ ಜಾಗೃತರಾಗಿ ಕ್ರೀಡೆಯನ್ನು ಮುಂದುವರೆಸುವುದು ಅಗತ್ಯ ಎಂದು ಕೆಲ ಹಿರಿಯರು ಹಾಗೂ ಹಿತೈಷಿಗಳು ಹೇಳಿದ್ದರಿಂದ ಯುಎಸ್ ಮಹಿಳಾ ಟೆನ್ನಿಸ್‍ನ ಚಾಂಪಿಯನ್ ಆಗಿ ಗ್ರ್ಯಾನ್‍ಸ್ಯಾಮ್ ಗೆದ್ದು ಖುಷಿಯ ಜತೆಗೆ ಎಚ್ಚರಿಕೆಯ ಜಾಗೃತ ಮನಸ್ಸು ನನಗೆ ಬಂದಿದೆ ಎಂದು ಹೇಳಿದ್ದಾರೆ.

Facebook Comments