ನೈಜ ಘಟನೆ ಆಧಾರಿತ ‘ನರಗುಂದ ಬಂಡಾಯ’

ಈ ಸುದ್ದಿಯನ್ನು ಶೇರ್ ಮಾಡಿ

ನೈಜ ಘಟನೆ ಆಧಾರಿತ ಚಿತ್ರಗಳು ಬರುವುದು ಬಹಳ ವಿರಳ. ಆದರೆ, 1980ರಲ್ಲಿ ನಡೆದ ರೈತರ ಹೋರಾಟದ ಕಥನ ನರಗುಂದ ಬಂಡಾಯ ಈಗಾಗಲೇ ನಾಟಕ ರೂಪದಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡಿದ್ದ ಈ ಕಥೆಯನ್ನು ನಿರ್ದೇಶಕ ನಾಗೇಂದ್ರ ಮಾಗಡಿ ಅವರು ಚಿತ್ರರೂಪಕ್ಕಿಳಿಸಿದ್ದಾರೆ. ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ರೈತರ ಜಮೀನಿನ ಮೇಲೆ ಹೆಚ್ಚಿನ ಕರ ವಿಧಿಸಲಾಗಿತ್ತು.

ಅದರ ವಿರುದ್ಧ ಹೋರಾಟ ದ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಗೋಲಿಬಾರ್‍ನಲ್ಲಿ ವೀರಮರಣ ಹೊಂದುತ್ತಾನೆ. ಆಗ ರೈತರ ಹೋರಾಟ ಇನ್ನು ತೀವ್ರವಾಗುತ್ತದೆ. ಒಂದು ಸಂಸಾರವೇ ಉರುಳುವಂತಾಗುತ್ತದೆ. ಇಂಥ ರೈತ ಹೋರಾಟದ ಕಥೆ ಈಗ ತೆರೆ ಮೇಲೆ ಬಂದಿದೆ. ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ , ಗಟ್ಟಿಮೇಳ ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟ ರಕ್ಷ್ ಈ ಚಿತ್ರದ ನಾಯಕನಾಗಿದ್ದು, ಮೊಗ್ಗಿನ ಮನಸಿನ ಹುಡುಗಿ ಶುಭಾಪುಂಜಾ ನಾಯಕಿಯಾಗಿದ್ದಾರೆ. ಉತ್ತರ ಕರ್ನಾಟಕದವರೇ ಆದ ಎಸ್.ಜಿ.ಸಿದ್ದೇಶ್ ಈ ಚಿತ್ರದ ಬರೆದಿದ್ದಾರೆ.

ಈ ಚಿತ್ರವನ್ನು ಎಸ್.ಜಿ.ಸಿದ್ದೇಶ್ ಹಾಗೂ ಶೇಖರ್‍ಯಲುವಿಗೆ ಸೇರಿ ನಿರ್ಮಿಸಿದ್ದಾರೆ. ಸಂಗೊಳ್ಳಿ ರಾಯಣ್ಣನಿಗೆ ಡೈಲಾಗ್ ಬರೆದಿದ್ದ ಕೇಶವಾದಿತ್ಯ ಈ ಚಿತ್ರದ ಸಂಭಾಷಣೆಗಳನ್ನು ರಚಿಸಿದ್ದಾರೆ. ಯಶೋವರ್ಧನ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಶೇಖರ್ ಯಲುವಿಗಿ, ನಮ್ಮ ಸಿನಿಮಾ ನಾಡಿನ ಮನೆ ಮನೆಗೂ ಮುಟ್ಟಿದೆ. ಇಂಥ ಒಳ್ಳೇ ಚಿತ್ರಕ್ಕೆ ಒಬ್ಬ ರೈತನ ಮಗನಾಗಿ ನಾನು ಸಪ್ರೋರ್ಟ್ ಮಾಡಿದ್ದೇನೆ ಎಂದರು.

ನಾಯಕ ನಟ ರಕ್ಷ್ ಮಾತನಾಡಿ, ಬಯೋಪಿಕ್ ಸಿನಿಮಾ ಅಂದರೆ ಅದಕ್ಕೆ ಅದರದ್ದೇ ಆದ ಒಂದು ತೂಕ ಇರುತ್ತದೆ. ಒಂದು ಒಳ್ಳೇ ಸಬ್ಜೆಕ್ಟ್‍ಗಾಗಿ ಕಾಯ್ತಾಯಿದ್ದಾಗ ನನಗೆ ಸಿಕ್ಕ ಚಿತ್ರವಿದು ಎಂದು ಹೇಳುತ್ತಾ. ಈಗಾಗಲೇ ಸುಮಾರು ಏಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಬಹಳ ನಿರೀಕ್ಷೆಯೊಂದಿಗೆ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಈ ನರಗುಂದ ಬಂಡಾಯ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.

ನಾಯಕಿ ಶುಭಾ ಪುಂಜಾ ಮಾತನಾಡಿ, ತುಂಬಾ ವರ್ಷಗಳ ನಂತರ ಇಂಥ ಒಂದು ಪಾತ್ರ ಮಾಡಿದ್ದೇವೆ. ಉತ್ತರ ಕರ್ನಾಟಕದ ಮಹಿಳೆಯಾಗಿ ಅಭಿನಯಿಸಿದ್ದು, ಖುಷಿ ನೀಡಿದೆ ಎಂದು ಹೇಳಿದರು. ನಿರ್ದೇಶಕ ನಾಗೇಂದ್ರ ಮಾಗಡಿ ಮಾತನಾಡಿ, ನಾನು ಮಾಡಿದ 11 ಚಿತ್ರಗಳೂ ಈ ಒಂದು ಚಿತ್ರಕ್ಕೆ ಸ ಮವಾಗಿದೆ. ಸುಮಾರು ಮೂರು ವರ್ಷಗಳ ಸತತ ಪ್ರಯತ್ನ ಈ ಚಿತ್ರವಾಗಿದೆ.

ಇದು ನನ್ನ ಜಿಲ್ಲೆಯ ಕಥೆಯಾಗಿದ್ದು, ಬಹಳ ಶ್ರಮವಹಿಸಿ ಪ್ರೀತಿಯಿಂದ ಚಿತ್ರವನ್ನು ಮಾಡಿದ್ದೇವೆ. ಎಲ್ಲರ ಸಹಕಾರ ಸಿಕ್ಕಿದೆ. ಈ ವರ್ಷದ ಉತ್ತಮ ಚಿತ್ರ ಇದಾಗಲಿದೆ ಎಂದು ಹೇಳಿದರು. ನಂತರ ಮತ್ತೋಬ್ಬ ನಟ ರವಿತೇಜ ಸೇರಿದಂತೆ ಚಿತ್ರತಂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ಚಿತ್ರ ಇಂದು ರಾಜ್ಯಾದ್ಯಂತ ಸುಮಾರು 250ಕ್ಕೂ ಹಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.

Facebook Comments