ರಾಜ್ಯದಲ್ಲಿ 657 ರುದ್ರಭೂಮಿಗಳ ಅಗತ್ಯವಿದೆ : ಸಚಿವ ನಾರಾಯಣಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.13- ರಾಜ್ಯದಲ್ಲಿ ಇನ್ನು 657 ರುದ್ರಭೂಮಿಯ ಅಗತ್ಯವಿದೆ ಎಂದು ಪೌರಾಡಳಿತ ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 30 ವರ್ಷದಲ್ಲಿ 2,223 ರುದ್ರಭೂಮಿಗಳ ಪೈಕಿ 1566 ಸ್ಮಶಾನಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.

ರುದ್ರಭೂಮಿ ಗಳಿಗೆ ಜಮೀನು ಒದಗಿಸಲು ಕಂದಾಯ ಅಧಿಕಾರಿಗಳಿಗೆ ಜವಬ್ದಾರಿ ನೀಡಲಾಗಿದೆ. ಸಾಕಷ್ಟು ಹಣವೂ ಇದೆ ಎಂದರು. ರುದ್ರಭೂಮಿ ಗಾಗಿ ಖಾಸಗಿ ಜಮೀ ನಿಗೂ ಅವಕಾಶವಿದೆ. ಸರ್ಕಾರಿ ಜಮೀನು ಪಡೆಯುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ಸಮಸ್ಯೆಯಿದ್ದು, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ರೇಷ್ಮೆ ಇಲಾಖೆಗೆ ಹೆಚ್ಚಿನ ಶಕ್ತಿ ತುಂಬುವ ಸಂಬಂಧ ಮುಖ್ಯಮಂತ್ರಿ ಗಳೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಶಾಸಕ ಅಜಯ್ ಧರ್ಮಸಿಂಗ್ ಪ್ರಶ್ನೆಗೆ ಉತ್ತರಿಸಿದರು.  ಮಂಡ್ಯದಲ್ಲೂ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಈಗ ಪ್ರತಿ ಕೆಜಿ ರೇಷ್ಮೆ ಗೂಡಿಗೆ 400 -500 ಮಾರುಕಟ್ಟೆ ಬೆಲೆ ಇದೆ ಎಂದರು.

ಶ್ರವಣಬೆಳಗೊಳ, ಗ್ರಾಮಪಂಚಾಯ್ತಿ ಯನ್ನು ಪರಿಶೀಲಿಸಿ ಸಾಧ್ಯವಾದರೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದರು.  ಪಟ್ಟಣ ಪಂಚಾಯ್ತಿಗಾಗಿ 15 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರಬೇಕು. 2011ರ ಗಣತಿ ಪ್ರಕಾರ ಶ್ರವಣಬೆಳಗೊಳ ಗ್ರಾಪಂನಲ್ಲಿ 6485 ಜನಸಂಖ್ಯೆ ಇರುವುದರಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಅವಕಾಶವಿಲ್ಲ ಎಂದರು.

ಬಾಲಕೃಷ್ಣ ಮಾತನಾಡಿ ಧಾರ್ಮಿಕ, ಐತಿಹಾಸಿಕ ಹಾಗೂ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸ ಬೇಕೆಂದು ಒತ್ತಾಯಿಸಿದರು.

Facebook Comments